Index   ವಚನ - 575    Search  
 
ಆ ಶರಣ ಸ್ಥಲಾನಂತರದಲ್ಲಿ ಆಚಾರಾದಿ ಮಹಾಲಿಂಗಗಳನು ಚೆನ್ನಾಗಿ ಒಳಕೊಂಡು ಆತ್ಮಜ್ಞಾನದಿಂದ ಸ್ಥೂಲ ಸೂಕ್ಷ್ಮ ಕಾರಣವೆಂಬ ತನುತ್ರಯವನು ಚೆನ್ನಾಗಿ ವ್ಯಾಪಿಸಿ ಆ ಶರೀರತ್ರಯಕ್ಕೆ ಆಶ್ರಯವಾದ ಆ ಆತ್ಮವನು ಪ್ರಕಾಶವ ಮಾಡಿ ಆ ತೇಜೋ ರೂಪವಾದ ಸ್ಥೂಲ ಸುಕ್ಷ್ಮಾತ್ಮನು ಚೈತನ್ಯ ರೂಪವೆಂಬ ಸಾಮರ್ಥ್ಯವನು ಆಕ್ರಮಿಸಿ ಸತ್ವಾದಿ ಗುಣಂಗಳನು ಲಿಂಗೈಕ್ಯವ ಮಾಡಿ ತೇಜೋರೂಪವಾದ ಸ್ಥೂಲ ಸೂಕ್ಷ್ಮ ಕಾರಣ ಶರೀರಗಳನು ಅಂಗತ್ರಯದಲ್ಲಿ ಅಡಗಿಸಿ ಪಂಚತನ್ಮಾತ್ರೆಗಳನು ಪಂಚ ಲಿಂಗಂಗಳಲ್ಲಿ ಏಕೀಕರಿಸುವುದಯ್ಯ ಶಾಂತವೀರೇಶ್ವರಾ