ಕ್ಷುತ್ತು ಪಿಪಾಸಾ ಶೋಕ ಮೋಹ
ಜನನ ಮರಣಂಗಳೆಂಬ ಷಡೂರ್ಮಿಗಳು,
ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರಂಗಳೆಂಬ ಅರಿಷಡ್ವರ್ಗಂಗಳು,
ಅಷ್ಟವಿಧಾರ್ಚನೆ ಇಲ್ಲದಿರ್ದ, ಭವರಹಿತವಾದ,
ಕರ್ಫೂರಾಗ್ನಿಗಳ ಯೋಗದೋಪಾದಿಯಲ್ಲಿ
ಮಹಾಲಿಂಗದಲೈಕ್ಯ ಉಳ್ಳಾತನೆ ಐಕ್ಯನಯ್ಯ.
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Kṣuttu pipāsā śōka mōha
janana maraṇaṅgaḷemba ṣaḍūrmigaḷu,
kāma krōdha lōbha mōha
mada matsaraṅgaḷemba ariṣaḍvargaṅgaḷu,
aṣṭavidhārcane illadirda, bhavarahitavāda,
karphūrāgnigaḷa yōgadōpādiyalli
mahāliṅgadalaikya uḷḷātane aikyanayya.
Śāntavīrēśvarā