Index   ವಚನ - 585    Search  
 
ಪುಣ್ಯವೆ ಆತ್ಮನು, ಪಾಪವೆ ದೇಹವು ಪುಣ್ಯವೆ ಲಿಂಗಿ, ಪಾಪವೆ ಅಂಗ. ಪುಣ್ಯ ಪಾಪವೆರಡು ಕೂಡಿ ದೇಹಾತ್ಮರಾದರು. ರಾತ್ರೆಯಲ್ಲಿ ವರ್ತಿಸುವುದರಿಂದ ಶೈತ್ಯ ಲಕ್ಷಣದಿಂದ ಕತ್ತಲೆ ಬೆಳೆದಿಂಗಳು ಎರಡಕ್ಕೂ ಸಖತ್ವ! ಕರ್ಮಕಾಂಡದಲ್ಲಿ ವರ್ತಿಸುವುದರಿಂದ ಅಜ್ಞಾನ ಲಕ್ಷಣದಿಂದ ಪಾಪ ಪುಣ್ಯವೆರಡಕ್ಕೆಯೂ ಸಖತ್ವ! ಅದು ಕಾರಣ ಭಕ್ತಿಪಥದಲ್ಲಿ ಪಾಫ ಪುಣ್ಯವೆರಡರ ಆವರ್ತನವೇನೂ ಇಲ್ಲವೆಂದು ತತ್ತ್ವಜ್ಞಾನಿಗಳೂ ಹೇಳುತ್ತಿಹರಯ್ಯ ಶಾಂತವೀರೇಶ್ವರಾ