Index   ವಚನ - 588    Search  
 
ಹೇಂಗೆ ಸೂರ್ಯನು ಸಮಸ್ತ ರಸಂಗಳನು ಭುಂಜಿಸುವನೊ ಅಗ್ನಿಯ ಎಲ್ಲಾ ಕಡೆಯಲ್ಲಿಯೂ ಗಮಿಸಿ ಸಮಸ್ತ ರಸಂಗಳನು ಭಕ್ಷಿಸುವನೊ ಹಾಂಗೆಯೇ ಶಿವಯೋಗೀಶ್ವರನು ತೃಪ್ತಿ ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ವಿಷಯಂಗಳನು ಷಡ್ವಿಧ ಲಿಂಗಂಗಳಿಗೆ ಅರ್ಪಿಸಿ ಆ ಪ್ರಸಾದವನು ಅನುಭವಿಸುತ್ತಿರ್ದನಾಗಿ ಪುಣ್ಯಪಾಪಂಗಳೆಂಬ ದ್ವಂದ್ವ ಕರ್ಮಂಗಳ ಲೇಪವಿಲ್ಲವಯ್ಯ ಶಾಂತವೀರೇಶ್ವರಾ