ಭಕ್ತನ ನಡೆವಳಿ ಏಂತೆಂದಡೆ:
ತನ್ನ ಅರ್ಥ ಪ್ರಾಣಾಭಿಮಾನವ
ಜಂಗಮ ಬಂದು ಗ್ರಹಿಸದೊಡೆ
ಕಂಡು ಕೇಳಿ ಶಿವಾರ್ಪಣವಾಯಿತ್ತೆಂದು
ಮನದಲ್ಲಿ ಸಂತೋಷಿಸಿದೊಡೆ ಪ್ರಸಾದ ಸಿದ್ಧ.
ಹೀಂಗಲ್ಲದೆ ಮನದಲ್ಲಿ ನೊಂದು
ಜಂಗಮವನುದಾಸೀನವ ಮಾಡಿ
ಬಿಟ್ಟೂಡೆ ಹಿಂದೆ ಕೊಂಡ ಪಾದತೀರ್ಥವೆಲ್ಲವು
ಅವರ ಮೂತ್ರವ ಕೊಂಡು ಸಮಾನ.
ಹಿಂದೆ ಕೊಂಡ ಪ್ರಸಾದವೆಲ್ಲವು ಅವರ
ಅಮೇಧ್ಯವ ಕೊಂಡ ಸಮಾನ. ಇದು ಕಾರಣ
ಅವನು ಆಚಾರಭ್ರಷ್ಟನು.
ಮನೆ ಧನ ಸತಿ ಎಂದೆಂಬನ್ನಕ್ಕರ ಅವನು ಭವಿ; ಭಕ್ತನಲ್ಲ.
ಪ್ರಸಾದಿ ಅಲ್ಲ, ಶೀಲವಂತನಲ್ಲ.
ಪಾದತೀರ್ಥ ಪ್ರಸಾದ ಮುನ್ನವೆ ಇಲ್ಲ.
ಅವಂಗೆ ನಾಯಕ ನರಕ ತಪ್ಪದಯ್ಯ
ಶಾಂತವೀರೇಶ್ವರಾ