Index   ವಚನ - 648    Search  
 
ವಾಯುವ್ಯ ಭಾಗದಲ್ಲಿ ತಾಮ್ರದ ಕಳಶ ನಂದ್ಯಾವರ್ತದ ಪುಷ್ಪದಿ ಪೂಜೆ. ಪಾರಿಜಾತದ ತಳಿರು ಸರಸ್ವತಿ ಎಂಬ ಗಂಗೆ. ತ್ರಿಕೂಟ ಪರ್ವತ ವಟವೃಕ್ಷ. ಭದ್ರ ಧೇನು ಅಪ್ಪು ಭೂತ ಉದಾನ ವಾಯು ಜ್ಞಾನ ಶಕ್ತಿ ವಾಮದೇವ ತತ್ವ ಅಥರ್ವಣವೇದ ಶಾಖೆ ‘ಓಂ ವಿಶ್ವತೋ ಮಖಂ ವಿಶ್ವತೋ ಚಕ್ಷು ಭುಜಃ ವಿಶ್ವತೋ ಬಾಹು ವಿಶ್ವತೋ ಪಾದ ವಿಶ್ವತೋ ಪಾತು ಸಮಿತಿ ಸಂಹಿಭ್ಯದ ಮತಿಂ ತನ್ನಿಹಿತೋದ್ಯಾದಿ ದೇವಾ ಭೂಮಿ ಜನಯೇಂ ದೇವ ಏಕಾ’ ಎಂದು ವಕಾರ ದೇಹ ಕೃಷ್ಣವರ್ಣ ಸಾಂಖ್ಯ ಗೋತ್ರ ತ್ರಿಷ್ಟಪು ಛಂದ ‘ವ’ಕಾರ ಬೀಜಾಕ್ಷರ ಹಂಸ ಪಂಚಾಕ್ಷರಿಯ ಮಂತ್ರ ಅಧಿದೇವತೆ ಇಂದ್ರ. ಅಲ್ಲಿಯ ಆಚಾರ್ಯರು ಪಂಡಿತಾರಾಧ್ಯದೇವರು ಆತನಂಗೆ ಗೌರವರ್ಣ ಹಂಸೆಯ ವಾಹನ ಉತ್ತರದಿಕ್ಕಿನ ಸೌಮ್ಯಪೀಠದ ಕೃಷ್ಣಜಿನದ ಗದ್ದುಗೆಯ ಮೇಲೆ ಸುಖಾಸನದಲ್ಲಿ ಕುಳ್ಳಿರ್ದು ಹಂಸ ಪಂಚಾಕ್ಷರಿಯ ಜಪಂಗೆಯ್ದುತ್ತಿಪ್ಪರಯ್ಯ ಶಾಂತವೀರೇಶ್ವರಾ