ಶಿವಲಿಂಗದ ಕರ್ಮಕಾಂಡ ಪ್ರಸಿದ್ಧವಾದ
ಕ್ರಿಯೆ ಸ್ವರೂಪವಾಗುಳ್ಳ ಆವುದಾನೊಂದು ಪೂಜೆಯುಂಟು,
ಆ ಪೂಜೆಯು ಅಲ್ಪಜ್ಞಾನಿಗಳಿಗೆ ಸಮ್ಮತವಾಗಿ
ಅರಿಯಲು ಯೋಗ್ಯವು.
ಜ್ಞಾನಕಾಂಡ ಪ್ರಸಿದ್ಧವಾದ ಅಂಥ ಪೂಜೆಯು
ಪರಿಪೂರ್ಣವಾದ ಶಿವಜ್ಞಾನಿಗಳಿಗೆ ಸಮ್ಮತವಯ್ಯ!
ದೇಹವೆ ದೇವಾಲಯ, ಜೀವನೆ ಪ್ರಾಣಲಿಂಗವೆಂದು
ಅಜ್ಞಾನವೆಂಬ ನಿರ್ಮಾಲ್ಯವನು ತ್ಯಜಿಸಿ,
ಸೋಹಂ ಭಾವದಿಂದ ಪೂಜಿಸುವುದಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಭಾವದಲ್ಲಿ ಪೂರ್ಣವಾದ ಸದ್ಭಾವ ಸ್ವರೂಪ
ಉಳ್ಳ ಲಿಂಗವು ಭಕ್ತನಂಗದಲ್ಲಿ ನಿಂದು ಮಹಾಜ್ಞಾನ ಸ್ವರೂಪವನು ಪ್ರಾಪ್ತಿಸಿದ ಭೇದವೆಂತಿದ್ದಿತ್ತೆಂದೊಡೆ ಮುಂದೆ ‘ಜ್ಞಾನಲಿಂಗಸ್ಥಲ’ವಾದುದು.
Art
Manuscript
Music
Courtesy:
Transliteration
Śivaliṅgada karmakāṇḍa prasid'dhavāda
kriye svarūpavāguḷḷa āvudānondu pūjeyuṇṭu,
ā pūjeyu alpajñānigaḷige sam'matavāgi
ariyalu yōgyavu.
Jñānakāṇḍa prasid'dhavāda antha pūjeyu
paripūrṇavāda śivajñānigaḷige sam'matavayya!
Dēhave dēvālaya, jīvane prāṇaliṅgavendu
ajñānavemba nirmālyavanu tyajisi,
sōhaṁ bhāvadinda pūjisuvudayya
śāntavīrēśvarā
Sūtra: Ī prakāradinda bhāvadalli pūrṇavāda sadbhāva svarūpa
uḷḷa liṅgavu bhaktanaṅgadalli nindu mahājñāna svarūpavanu prāptisida bhēdaventiddittendoḍe munde ‘jñānaliṅgasthala’vādudu.