ಭಾವವನರುಹಿಸುವ ಜ್ಞಾನವು
ಅವ ಸ್ಥಲದಲ್ಲಿ ಲಯವನೆಯ್ದುವುದು ಆ ಸ್ಥಲವು
ವೀರಶೈವ ಶಾಸ್ತ್ರಜ್ಞಾನಿಗಳಿಂದ ಜ್ಞಾನಲಿಂಗವೆಂದು ಹೇಳಿದೆ.
ಬ್ರಹ್ಮ ವಿಷ್ಣು ರುದ್ರ ರೂಪವಾದ ತ್ರಿಮೂರ್ತಿ
ಭೇದಂಗಳಿಂದೆ ಸತ್ವರಜಸ್ತಮೋ
ರೂಪವಾದ ಗುಣತ್ರಯವನು ಮೀರಿ
ವರ್ತಿಸುವ ಸಂಪತ್ತಿಯುಳ್ಳ ಆವುದಾನೊಂದು ಪರಬ್ರಹ್ಮ[ವ]
ಶ್ರುತಿ ಗುರು ಸ್ವಾನುಭಾವಗಳಿಂದೆ
ಬೋಧಿಸುವುದಾದೊಡೆ ಜ್ಞಾನಕ್ಕಾಶ್ರಯವಾದ
ತೃಪ್ತಿಲಿಂಗವೆಂದು ಹೇಳುವರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Bhāvavanaruhisuva jñānavu
ava sthaladalli layavaneyduvudu ā sthalavu
vīraśaiva śāstrajñānigaḷinda jñānaliṅgavendu hēḷide.
Brahma viṣṇu rudra rūpavāda trimūrti
bhēdaṅgaḷinde satvarajastamō
rūpavāda guṇatrayavanu mīri
vartisuva sampattiyuḷḷa āvudānondu parabrahma[va]
śruti guru svānubhāvagaḷinde
bōdhisuvudādoḍe jñānakkāśrayavāda
tr̥ptiliṅgavendu hēḷuvarayya
śāntavīrēśvarā