Index   ವಚನ - 693    Search  
 
ಶಾಂತಿಯ ಭಸ್ಮೋದ್ಧೂಳನ, ಶುಚಿತ್ವವೆ ಮಣಿ ಭೂಷಣ, ವಿಷಯ ಶಿಕ್ಷೆಯೆ ದಂಡ, ಹಸ್ತದಲ್ಲಿಯ ಪರತತ್ತ್ವವೆ ಪಾಣಿ ಕಪ್ಪರವು, ಕಾಯುವ ಕಂಥೆ, ಕರುಣವೆ ಕಮಂಡಲು, ಅರಿವೆ ಜೋಳಿಗೆ, ಹೃದಯ ಕಮಲವೆಂಬ ಸಜ್ಜೆಯಲ್ಲಿ ಪ್ರಾಣಲಿಂಗವ ಧರಿಸಿ ‘ಭಕ್ತಿ ಭಿಕ್ಷಾಂದೇಹಿ’ ಎಂದು ಆಚರಿಸುವಾತನೆ ಪ್ರಭು ನಿರಂಜನ ತಾನೆ ನೋಡಾ ಶಾಂತವೀರೇಶ್ವರಾ