Index   ವಚನ - 695    Search  
 
ಶಿವಲಿಂಗಾರ್ಚನೆಯಿಂದ ಭೇದವಿಲ್ಲದ ಮನಸ್ಸುಳ್ಳವನಾಗಿ, ಆ ಶಿವಲಿಂಗದಲ್ಲಿ ಇರಿಸಿದ ಇಂದ್ರಿಯಂಗಳ ಸಮೂಹ ಉಳ್ಳಾತನಾಗಿ, ಸ್ವೇಚ್ಛಾ ಗಮನಿಯಾಗಿ ಆತ್ಮನಂದ ಉಳ್ಳವನಾದ, ವೀರಮಾಹೇಶ್ವರನು ಜಂಗಮಲಿಂಗವೆಂದು ಹೇಳುವರಯ್ಯ ಶಾಂತವೀರೇಶ್ವರಾ