Index   ವಚನ - 705    Search  
 
ಆವುದಾನೊಂದು ದೊರಕಿದ ವಸ್ತುವಿನಿಂದ ಸಂತುಷ್ಟನಾಗಿ ಮೌನಿಯಾಗಿ, ಸಮಾನ ನಿಂದಾಸ್ತುತಿಗಳುಳ್ಳವನಾಗಿ ನಿರ್ದೇಶನವಿಲ್ಲದವನಾಗಿ, ನಿಶ್ಚಲ ಬುದ್ಧಿ ಉಳ್ಳವನಾಗಿ, ಭಕ್ತಿ ಉಳ್ಳವನಾಗಿರುವವನು, ಅವನು ಶಿವಂಗೆ ಪ್ರಿಯವಾದಾತನಯ್ಯ ಶಾಂತವೀರೇಶ್ವರಾ