Index   ವಚನ - 20    Search  
 
ಮತ್ತಂ, ಸಮಸ್ತಪಾಶಂಗಳು ತೊಲಗಲೋಸ್ಕರ ದೀಕ್ಷೆ ಮಾಡಲ್ಪಟ್ಟಿತ್ತು. ಅಂತಾದೊಡೆ ದೀಕ್ಷೆಯಾಗಿಯೂ ಕರ್ಮಾಧಿಕಂಗಳು ಏನು ಕಾರಣ ತೊಲಗವು? ಎಂತೆಂಬ ಚೋದ್ಯಮಂ ಕಿರಣದಲಿ ಪ್ರಶ್ನೋತ್ತರ ಕ್ರಮದಿಂದ ದೃಷ್ಟಾಂತ ಪೂರ್ವಕವಾಗಿ ತೊಲಗಿಸುತ್ತಿದ್ದಾನು. ಅದೆಂತೆಂದೊಡೆ: ಸಿದ್ಧವಾದ ಮಂತ್ರಂಗಳಿಂದ ಅಮೂರ್ತವಾದ ವಿಷಯ ಶಕ್ತಿಗೆ ಕ್ಷಯವೆಂತಂತೆ ಅಂಕುರೋತ್ಪತ್ತಿಗೆ ಕಾರಣವಾದ ಬೀಜವೆಂತು ಹುರಿಯಲ್ಪಡುವ[ದೆಂತಂತೆ] ದೀಕ್ಷಾಕಾಲದ ಪ್ರಸಿದ್ಧವಾದ ಮಂತ್ರಂಗಳಿಂದ ಅನೇಕ ಭವಂಗಳಲ್ಲಿ ಮಾಡಲ್ಪಟ್ಟ ಭವಬೀಜಂಗಳಾದ ಕರ್ಮಂಗಳು ಸುಡಲ್ಪಟ್ಟವು. ಆಗಾಮಿ ಕರ್ಮಂಗಳು ತಡೆಯಲ್ಪಟ್ಟವು. ಪ್ರಾರಬ್ಧಕರ್ಮವು ಭೋಗಾಂತರದಲ್ಲಿ ಕೆಡಲ್ಪಟ್ಟಿತು. ಇಂತೆಂದು ಕಿರಣಂ,ಗರುಡ ಉವಾಚ: “ಪಾಶವಿಶ್ಲೇಷಣಾರ್ಥಂತು ನ್ಯ ದೀಕ್ಷೇಚ ಕ್ರಿಯತೇ ಕಿಲ || ವಿಶ್ಲೇಷೋsಪಿ ನ [ಈಶ್ವರ] ದೃಷ್ಟಾಂತ್ಕಥಂ ವದ ಭವಾನೆ ಹೋ || ವಾಚ ಪಾಶಸ್ತೋಮಃ ಕ್ಷಯಃ ಸಿದ್ಧಃ ಸಂಸಿದ್ಧಿಃ ಸೋsಪಿ|| ಶಂಬರೈಃ ಶಂಬರಾಣಾಮಚಿಂತ್ಯತ್ವಾದ್ಯಥಾ ಮೂರ್ತಿ||ವಿಚಕ್ಷಯಃ||ಅನೇಕ ಭವಿ ಕರ್ಮದಗ್ಧಂ ಬೀಜಮಿವಾಣುಭಿಃ | ಭವಿಷ್ಯದಪಿ ಸಂರುದ್ಧಂಯಯೇದಂ ತದ್ಧಿಭೋಗತಃ||” ಇಂತೆಂದು ಕಿರಣಾಗಮಂ ಪೇಳೊದಯ್ಯ, ಶಾಂತವೀರೇಶ್ವರಾ.