Index   ವಚನ - 31    Search  
 
‘ಮಂತ್ರ ಯಂತ್ರಕ್ರಿಯಾ ಮುದ್ರಾನ್ಯಾಸಾಶ್ಚಾಹ್ವಾನಕಾದಿಭಿಃ | ಉಪಚಾರೈರ್ಬಹುವಿಧೈರ್ಲಿಂಗಸಿಂಹಾಸನೇ ಯಜೇತ್ ||’ ಎಂದು ಶಿವಾದಿ ಮಂತ್ರಂಗಳಿಂದಲೂ ಆಯಾಯ ಮಂತ್ರಂಗಳ ಯಂತ್ರ ಕ್ರಿಯೆಗಳಿಂದಲೂ ಮಹಾಮುದ್ರೆ ಮೊದಲಾದ ಮುದ್ರೆಗಳಿಂದಲೂ ನ್ಯಾಸಂಗಳಿಂದಲೂ ಬಳಿಕ ‘ಓಂ ಬ್ರಹ್ಮ ಸರ್ವಜ್ಞಶಕ್ತಿಧಾಮ್ನೇ ಹೃದಯಾ ನಮಃ ಓಂ ಹ್ರೀಂ ತೃಪ್ತಿಶಕ್ತಿಧಾಮ್ನೇ ಶಿರಸೆ ಸ್ವಾಹಾ ಓಂ ಹ್ರೂಂ ಅನಾದಿ ಬೋಧಶಕ್ತಿಧಾಮ್ನೇ ಶಿಖಾಯೈವಷಟ್ ಓಂ ಹ್ರೈಂ ಸ್ವತಂತ್ರಶಕ್ತಿಧಾಮ್ನೇ ಕವಚಾಯಹಿಂ | ಓಂ ಹ್ರೈಂ ಅಲುಪ್ತಶಕ್ತಿಧಾಮ್ನೇ ನೇತ್ರತ್ರಯಾಯವೌಷಟ್ || ಓಂ ಹ್ರಃ ಅನಂತಶಕ್ತಿಧಾಮ್ನೇ ಅಸ್ತ್ರಾಯಷಟ್’ ಎಂದು ಷಡಂಗನ್ಯಾಸಗೆಯ್ದು, ಬಳಿಕ ‘ಓಂ ಹ್ರೀಂ ಈಶಾನಾಯ ನಮಃ’ ಎಂದು ಶಿರಸ್ಸಿನಲ್ಲಿ. ‘ಓಂ ಹ್ರೀಂ ತತ್ಪುರುಷಾಯ ನಮಃ’ ಎಂದು ಮುಖದಲ್ಲಿ ‘ಓಂ ಹ್ರೀಂ ಅಘೋರಾಯ ನಮಃ’ ಎಂದು ಹೃದಯದಲ್ಲಿ ‘ಓಂ ಹ್ರೀಂ ವಾಮದೇವಾಯ ನಮಃ’ ಎಂದು ಗುಹ್ಯದಲ್ಲಿ. ‘ಓಂ ಹ್ರಿಂ ಸದ್ಯೋಜಾತಾಯ ನಮಃ’ ಎಂದು ಪಾದಂಗಳಲ್ಲಿ ಪಂಚಬ್ರಹ್ಮನ್ಯಾಸಂಗಳಂ ಮಾಡಿ, ಆಹ್ವಾನ ಸ್ಥಾಪನ ಸನ್ನಿರೋಧನ ಮೊದಲಾದವರಿಂದವೂ ಷೋಡಶೋಪಚಾರ ಮೊದಲಾದ ಉಪಚಾರಂಗಳಿಂದಲೂ ಲಿಂಗವನು ಸಿಂಹಾಸನದಲ್ಲಿ ಪೂಜಿಸೂದು. ‘ಆತ್ಮಾರ್ಥಂ ಚ ಪರಾರ್ಥಂ ಚ ಪೂಜಾದ್ವಿವಿಧಮುಚ್ಯತೇ’ ಎಂದು ಈ ಕ್ರಮದಿಂದ ಮಾಡಲ್ಪಟ್ಟ ಶಿವಲಿಂಗಪೂಜೆ ಆತ್ಮಾರ್ಥಪೂಜೆ ಎಂದು, ಪರಾರ್ಥಪೂಜೆ ಎಂದು ಎರಡು ಪ್ರಕಾರವಾಗಿ ಹೇಳಲ್ಪಟ್ಟುದಯ್ಯ ಶಾಂತವೀರೇಶ್ವರಾ