ಪರಾರ್ಥಪೂಜೆಯನಾಯಿತ್ತಾದೊಡೆ,
ಅಲ್ಲಿಂದ ಮೇಲೆ ಕೇಳು: ‘ಗ್ರಾಮಾದೌಸ್ಥಾಪಿತೇ ಲಿಂಗೇ ಯದ್ವಾದೈವಾದಿ
ನಿರ್ಮಿತೇ ಪರಾರ್ಥಮಿತಿಜ್ಞೇಯಂ ಸರ್ವಪ್ರಾಣಿತಾವಹಿ’
ಇಂತೆಂದು ಆವುದಾನೊಂದು ಕಾರಣದಿಂದ
ದೇವ ಋಷಿ ದಾನವ ಮಾನವಾದಿಗಳಿಂದ ನಿರ್ಮಿಸಿ,
ಗ್ರಾಮಗಿರಿ ಗಂಹ್ವರ ವನ ಮೊದಲಾದವರಲ್ಲಿ ಪ್ರತಿಷ್ಠಿತವಾದ
ಶಿವಲಿಂಗಪೂಜೆ ಪರಾರ್ಥಪೂಜೆ ಎಂದು ಅರಿಯಬೇಕಾದುದು.
ಆ ಪೂಜೆಯಲ್ಲಿ ಪ್ರಾಣಿಗಳಿಗೆಯೂ ಹಿತವ ಮಾಡುವಂಥಾದು
‘ಶಿವದ್ವಿಜೇನ ಕರ್ತವ್ಯಂ ದ್ವಿಧಾ ಪೂಜೇತಿ ಬೋಧಿತಾ’ ಎಂದು
ಈ ಕ್ರಮದಿಂದ ಹೇಳಲ್ಪಟ್ಟ ಎರಡು ಪ್ರಕಾರದಪೂಜೆ
ಶಿವಬ್ರಾಹ್ಮಣನಿಂದವೆ ಮಾಡಲ್ತಕ್ಕಂಥಾದು
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Parārthapūjeyanāyittādoḍe,
allinda mēle kēḷu: ‘Grāmādausthāpitē liṅgē yadvādaivādi
nirmitē parārthamitijñēyaṁ sarvaprāṇitāvahi’
intendu āvudānondu kāraṇadinda
dēva r̥ṣi dānava mānavādigaḷinda nirmisi,
grāmagiri ganhvara vana modalādavaralli pratiṣṭhitavāda
śivaliṅgapūje parārthapūje endu ariyabēkādudu.
Ā pūjeyalli prāṇigaḷigeyū hitava māḍuvanthādu
‘śivadvijēna kartavyaṁ dvidhā pūjēti bōdhitā’ endu
ī kramadinda hēḷalpaṭṭa eraḍu prakāradapūje
śivabrāhmaṇanindave māḍaltakkanthādu
śāntavīrēśvarā