Index   ವಚನ - 42    Search  
 
‘ವಿದ್ಯಾಯಾಂ ರಮತೇ ಯಸ್ಮಾನ್ಮಾಯಾಂ ಹೇಯಾ ಶ್ವವದ್ರಹೇತ್ | ಅನೇನೈವ ನಿರುಕ್ತೇನ ವೀರಮಾಹೇಶ್ವರಃ ಸ್ಮೃತಃ||’ ಎಂತೆಂದು ಯಾವ ಕಾರಣದಿಂದೆ ಜ್ಞಾನ[ದ]ಲ್ಲಿ ರಮಿಸುತ್ತಿದ್ದಪನು, ಅದು ಕಾರಣದ ದೆಸೆ[ಯಿಂ]ದೆ ಜಿಗುಪ್ಸಾ ಸ್ವರೂಪವಾದಂಥ ಮಾಯೆಯನು ಶುನಿಯ ಕಂಡ ಹಾಂಗೆ ಬಿಡುವುದು. ಈ ನಿರ್ವಚನದಿಂದವೆ ವೀರ ಮಾಹೇಶ್ವರನೆಂದು ಹೇಳಲ್ಪಟ್ಟನಯ್ಯಾ, ಮದ್ಗುರು ಶಾಂತವೀರೇಶ್ವರಾ