Index   ವಚನ - 62    Search  
 
‘ಮೂಲಮಂತ್ರಂತೂಪದೇಶೇತ್ತತೋ ಲಿಂಗಂ ಪ್ರದಾಪಯೇತ್ | ಶ್ರೇಷಾಣಿ ಸರ್ವಕರ್ಮಾಣಿ ದೀಕ್ಷಾದ್ಪ್ರೋಕ್ತ ಕ್ರಮಾಚ್ಚರೇತ್||’ ಇಂತೆಂದುದಾಗಿ, ಸಮಸ್ತ ಮಂತ್ರಂಗಳಿಗೆ ಮೂಲವಪ್ಪ ಪಂಚಾಕ್ಷರಮಂತ್ರವನುಪದೇಶಿಸುವುದು. ಆ ಮಂತ್ರೋಪದೇಶದ ತರುವಾಯದಲ್ಲಿ ಶಿಷ್ಯಂಗೆ ಪ್ರಾಣಲಿಂಗೋಪದೇಶಮಂ ಮಾಡುವುದು. [ಉ]ಳಿದ ಸಮಸ್ತ ಕ್ರಿಯೆಗಳಂ ವೀರಶೈವ ದೀಕ್ಷಾಮಾರ್ಗದಲ್ಲಿ ಹೇಳಲ್ಪಟ್ಟ ಕ್ರಮದಲ್ಲಿ ಚರಿಸುವುದಯ್ಯ ಶಾಂತವೀರೇಶ್ವರಾ.