Index   ವಚನ - 63    Search  
 
‘ದೇಹೇ ಪ್ರಾಣಂ ಸಮಾಯೋಜ್ಯ ಪ್ರಾಣಲಿಂಗೇ ಪ್ರಕಲ್ಪಯೇತ್ | ಅವಿನಾಭಾವ ಸಂಯೋಗಾತ್ತಸ್ಮಾದೈಕ್ಯಂ ಪ್ರಕಲ್ಪಯೇತ್|’ ಎಂದುದಾಗಿ, ಈ ಪ್ರಕಾರದಿಂದ ವೀರಶೈವದೀಕ್ಷಿತನಾದ ವೀರಮಾಹೇಶ್ವರನು ದೇಹಪ್ರಾಣಾಂಗಳ ವರ್ತನೆ ಬೇರಾಗದ ಹಾಂಗೆ, ಏಕವಾಗಿ ಕೂಡಿ ತನ್ನ ಪ್ರಾಣಲಿಂಗದಲ್ಲಿ ಕಲ್ಪಿಸೂದು. ಆ ಅಗಲಿಕೆಯಿಂದ, ಭಾವದ ಕೂಟದೆಸೆಯಿಂದ ಪ್ರಾಣಲಿಂಗವೆಂಬೆಡನೂ ಏಕವನು ಮಾಡುವುದಯ್ಯ ಶಾಂತವೀರೇಶ್ವರಾ.