Index   ವಚನ - 76    Search  
 
ಬಳಿಕಾ ಧ್ಯಾನಕ್ರಮದಲ್ಲಿ ,ಮಂತ್ರಾಧಿದೇವತೆಗೆ ಅಘೋರಾದಿ ಘೋರಮೂರ್ತಿ ಎಂದು, ಸದಾಶಿವ ಮಿಶ್ರಮೂರ್ತಿ ಎಂದು, ಸಾಂಬಶಿವಾದಿ ಶಾಂತಮೂರ್ತಿ ಎಂದು, ತ್ರಿವಿಧಮೂರ್ತಿಗಳುಂಟವರಲ್ಲಿ, ಘೋರಮೂರ್ತಿಧ್ಯಾನದಿಂ ಚಿರಕಾಲಕ್ಕೆ ಸಕಲ ಸಿದ್ಧ್ಯಾದಿಗಳಹವು. ಶಾಂತಮೂರ್ತಿ ಧ್ಯಾನದಿಂದ ಶೀಘ್ರ ಚಿರಕಾಲವಲ್ಲದೆ ಪ್ರಚಾದಿಗಳಹವೆಂದರಿದು ಧ್ಯಾನಿಸೂದಾ ಧ್ಯಾನರಹಿತವಾಗಿ ಮಾಳ್ಪುದೆ ಅಗರ್ಭಜಪವಾ ಧ್ಯಾನಯುಕ್ತವಾಗಿ ಮಾಳ್ಪುದೆ ಸಗರ್ಭಜಪವವರೊಳಗೆ ಅಗರ್ಭಕ್ಕೆ ಸಗರ್ಭವೆ ಕೋಟಿ ಮಡಿ ಮಿಗಿಲೆಂದು ಸಂಧ್ಯಾನಿಸೂದಯ್ಯ ಶಾಂತವೀರೇಶ್ವರಾ.