Index   ವಚನ - 89    Search  
 
ನಿವಾರಕ ಕರ್ಮದೋಪಾದಿಯಲ್ಲಿ ಸೂಕ್ಷ್ಮವಾಗಿ ಶೀತವರ್ಣವಾಗಿ ಪ್ರಕಾಶಿಸುತ್ತಿರ್ದ, ಅಣುವಿನೋಪಾದಿಯ ಶಿಖಿಯುಂಟು. ಅಂಥಾ ಶಿಖಿಯ ಮಧ್ಯದಲ್ಲಿ ಪರಮಾತ್ಮಲಿಂಗವು ವಿಶೇಷವಾಗಿರುತ್ತಿರ್ದಿತು. ಧಾರಣವೆ ಬಿಲ್ಲು, ಮನಸ್ಸೇ ಭಾಣವು; ಪರಬ್ರಹ್ಮವೇ ಆ ಬಾಣಕ್ಕೆ ಗುರಿಯೆಂದು ಹೇಳಲ್ಪಡುತ್ತಿದ್ದಿತು. ಮರೆವೆಯಿಲ್ಲದುದರಿಂದ ಭೇದಿಸಲ್ತಕ್ಕುದು. ಆ ಬಾಣದೋಪಾದಿಯಲ್ಲಿ ಪರಬ್ರಹ್ಮಸ್ವರೂಪವಾದವೆನೇ ಶಿವಯೋಗೀಶ್ವರನಯ್ಯ, ಶಾಂತವೀರೇಶ್ವರಾ.