Index   ವಚನ - 6    Search  
 
ಚತುರ್ದಶ ಭುವನಂಗಳನು, ಆಖಿಳ ಬ್ರಹ್ಮಾಂಡಗಳನು ಸಪ್ತ ಸಮುದ್ರಂಗಳನು, ಸಪ್ತದ್ವೀಪಂಗಳನು ಸಪ್ತಕುಲಪರ್ವತಂಗಳನು, ಸಮಸ್ತ ಗ್ರಹರಾಶಿ ತಾರಾಪಥಂಗಳನು ರಚಿಸಿದಾತನು ನೀನೆ ದೇವಾ. ಅವೆಲ್ಲವನು ಸಂಹಿರಿಸುವಾತನೆ ನೀನೆ ದೇವಾ ಸ್ತ್ರೀಲಿಂಗ ಪುಲ್ಲಿಂಗ ನಪುಂಸಕಲಿಂಗವೆಂಬ ಈ ತ್ರಿವಿಧದಿಂದ ಹದಿನಾಲ್ಕು ಭುವನದೊಳಗಿರುವ ಸಚರಾಚರ[ವ] ನಿನ್ನ ಮಾಯೆಯ ಕೈಯಿಂದಾಗುಮಾಡಿದೆಯಯ್ಯ ಶೂನ್ಯನಾಥ.