ಮಲಮಾಯಾದಿಗಳು ಅವಯವಂಗಳು
ಸಕಲ ಕರಣಂಗಳಿಲ್ಲದ ಎಲ್ಲಾ ತತ್ವಂಗಳನು ಮೀರಿದ
ಅಜ್ಞಾನವೆ ಹೊದ್ದದ
ಪರಶಿವನು ಅವಿದ್ಯೋಪಾಧಿಕತ್ವದಿಂದ
ಬ್ರಹ್ಮಾದಿ ತೃಣಾಂತವಾದ ಪ್ರಾಣಿಜಾಲವಾಗಿ
ಪುಣ್ಯಪಾಪ ಫಲಂಗಳಿಲ್ಲ.
ಆ ಪರಬ್ರಹ್ಮ ಹೇಂಗೆ ಪರಿವೃತ್ತವಾಯಿತ್ತೆಂದಡೆ:
ಬ್ರಹ್ಮ ಹರಿಯು ಸರ್ವದೇವತೆಗಳು ಮನುಷ್ಯರು ಪಶುಗಳು
ಮೃಗಂಗಳು ಮೊದಲಾದ
ಸರ್ವಪ್ರಾಣಿಗಳು ಶಿವನೆಂಬ ಸಮುದ್ರದಲ್ಲಿಯ
ತುಂತುರ್ವನಿಗಳೆಂದರಿವುದು ನೋಡಾ.
ಆ ಪರಬ್ರಹ್ಮವು ಎಲ್ಲಿಹನೆಂದಡೆ:
ವೇದಾಂತ ಶಾಸ್ತ್ರಂಗಳ ಬಲ್ಲ ನಿರ್ಮಲಮತಿಗಳ
ಹೃತ್ಕಮಲ ಮಧ್ಯದಲ್ಲಿ ಇಹಾತನೆಂದರಿಯಲು
ಯೋಗ್ಯ ನೋಡಾ.
ಇದು ಕಾರಣ, ಶರಧಿಯಲ್ಲಿ ಪುಟ್ಟಿದ ನೊರೆ ತೆರ
ಬುದ್ಬುದ ಸೀಕರಾದಿಗಳು
ಶರಧಿಯಾಗಲರಿಯವು.
ರವಿಯಲ್ಲಿ ಪುಟ್ಟಿದ ರುಚ್ಯಾತಾಪಾದಿಗಳು
ರವಿಯಂಶವಾಗಿದ್ದು ರವಿಯಲ್ಲ.
ಚಂದ್ರನಲ್ಲಿ ತೋರುವ ಜೋತ್ಸ್ನೆ ಹಿಮಂಗಳು
ಚಂದ್ರ ತಾನೆಯಲ್ಲ.
ಅಗ್ನಿ ಸ್ಫುರಿಸಿದ ಉಷ್ಣರ್ಚಿಧೂಮ್ನಾದಿಗಳು ಪುಟ್ಟಿ ಅಗ್ನಿಯಲ್ಲ.
ಅವರು ಹಾಂಗೆ ಪರತತ್ವದ ನಾನಾ ವೈಚಿತ್ರ್ಯದಿಂದ
ಬ್ರಹ್ಮಾದಿ ತೃಣಾಂತವಾದ ಜೀವಜಾಲ ಪುಟ್ಟಿಯು
ಅವು ಪರತತ್ವವು? ಅಲ್ಲ.
ಇಂತಪ್ಪ ಜೀವತತ್ವವೆಂದು ಭಾವಿಸೂದು ಭ್ರಾಂತಿಜ್ಞಾನ ನೋಡಾ.
ಜಲಕುಂಭಸಹಸ್ರಂಗಳಲ್ಲಿ ತೋರುವ ಚಂದ್ರಬಿಂಬವು
ಪ್ರತ್ಯಕ್ಷ ಕುಂಭಸಹಸ್ರಂಗಳಲ್ಲಿ ತೋರತ್ತಿರ್ದೊಡಂ,
ಚಂದಿರಬಿಂಬ ಸಹಸ್ರಂಗಳಾಗಿ ಭ್ರಾಂತರ ದೃಷ್ಠಿಗೆ ತೋರುತ್ತಿಹುದಲ್ಲದೆ,
ನಿಭ್ರಾಂತರ ದೃಷ್ಠಿಗೆ ಚಂದಿರಬಿಂಬ ಒಂದೆ ನೋಡಾ.
ಅದೆಂತೆಂದೊಡೆ:
ಶರಧಿಯಲ್ಲಿ ಮರುಸ್ಪಂದದಿಂ ತರಂಗಾದಿ
ನಾನಾಕಾರಂ ತೋರಿದ ಹಾಂಗೆ,
ತನ್ನ ವಿಚಿತ್ರ ಶಕ್ತಿಗಳೆಂಬ ವಾಯುಸ್ಪಂದನದಿಂದ
ತನ್ನಲ್ಲಿ ಜಗತ್ತು ಸ್ಪುರಿಸಿತ್ತು ನೋಡಾ.
ಅಲ್ಲಿ ಶಿವಾಂಶವಾದ ಹಮ್ಮು ಪುಟ್ಟಿತ್ತು.
ಅದರಿಂ ಧಾತುಗಳಿಂ ಬದ್ಧವಾಗಿ ತ್ರಿಗುಣಾತ್ಮಕವಾಗಿ
ಪಂಚಮಹಾಭೂತಾತ್ಮಕವಾದ ಪಿಂಡವಾಯಿತ್ತು.
ಅದು ಕಾರಣ, ನಾನು ಜೀವನೆಂದು ಬಗೆದಿಹ ವ್ಯಾಕುಲದಿಂ
ನಿರ್ಮಲವಾದ ಪರಮಾತ್ಮನಲ್ಲಿ ಸುಖದಃಖಂಗಳೊಡನೆ
ಆವಾಗಳು ಕೂಡಿಹ ಜೀವತ್ವ ಹೇಳಲ್ಪಟ್ಟುದು ಕಾಣಾ
ಶೂನ್ಯನಾಥಯ್ಯ.
Art
Manuscript
Music
Courtesy:
Transliteration
Malamāyādigaḷu avayavaṅgaḷu
sakala karaṇaṅgaḷillada ellā tatvaṅgaḷanu mīrida
ajñānave hoddada
paraśivanu avidyōpādhikatvadinda
brahmādi tr̥ṇāntavāda prāṇijālavāgi
puṇyapāpa phalaṅgaḷilla.
Ā parabrahma hēṅge parivr̥ttavāyittendaḍe:
Brahma hariyu sarvadēvategaḷu manuṣyaru paśugaḷu
mr̥gaṅgaḷu modalāda
sarvaprāṇigaḷu śivanemba samudradalliya
tunturvanigaḷendarivudu nōḍā.
Ā parabrahmavu ellihanendaḍe:
Vēdānta śāstraṅgaḷa balla nirmalamatigaḷa
Hr̥tkamala madhyadalli ihātanendariyalu
yōgya nōḍā.
Idu kāraṇa, śaradhiyalli puṭṭida nore tera
budbuda sīkarādigaḷu
śaradhiyāgalariyavu.
Raviyalli puṭṭida rucyātāpādigaḷu
raviyanśavāgiddu raviyalla.
Candranalli tōruva jōtsne himaṅgaḷu
candra tāneyalla.
Agni sphurisida uṣṇarcidhūmnādigaḷu puṭṭi agniyalla.
Avaru hāṅge paratatvada nānā vaicitryadinda
brahmādi tr̥ṇāntavāda jīvajāla puṭṭiyu
avu paratatvavu? Alla.
Intappa jīvatatvavendu bhāvisūdu bhrāntijñāna nōḍā.
Jalakumbhasahasraṅgaḷalli tōruva candrabimbavu
pratyakṣa kumbhasahasraṅgaḷalli tōrattirdoḍaṁ,
candirabimba sahasraṅgaḷāgi bhrāntara dr̥ṣṭhige tōruttihudallade,
nibhrāntara dr̥ṣṭhige candirabimba onde nōḍā.
Adentendoḍe:
Śaradhiyalli maruspandadiṁ taraṅgādi
nānākāraṁ tōrida hāṅge,
tanna vicitra śaktigaḷemba vāyuspandanadinda
tannalli jagattu spurisittu nōḍā.
Alli śivānśavāda ham'mu puṭṭittu.Adariṁ dhātugaḷiṁ bad'dhavāgi triguṇātmakavāgi
pan̄camahābhūtātmakavāda piṇḍavāyittu.
Adu kāraṇa, nānu jīvanendu bagediha vyākuladiṁ
nirmalavāda paramātmanalli sukhadaḥkhaṅgaḷoḍane
āvāgaḷu kūḍ'̔iha jīvatva hēḷalpaṭṭudu kāṇā
śūn'yanāthayya.