ಮಹದಾದಿ ತತ್ವಂಗಳಿಗೂ ಪಂಚಸಾದಾಖ್ಯಂಗಳಿಗೂ
ಪಂಚಕಲೆಗಳಿಗೂ ಮೂವತ್ತರು ತತ್ವಂಗಳಿಗೂ
ಸಪ್ತಸಮುದ್ರಂಗಳಿಗೂ ಸಪ್ತದ್ವೀಪಂಗಳಿಗೂ
ಸಪ್ತಕುಲಪರ್ವತಂಗಳಿಗೂ ಸಮಸ್ತಗ್ರಹರಾಶಿಗಳಿಗೂ
ಅನಂತಕೋಟಿ ಗವಾಂ ಬ್ರಹ್ಮಾಂಡಗಳಿಗೂ
ಅನಂತಕೋಟಿ ಕುಕ್ಕುಟ ಬ್ರಹ್ಮಾಂಡಗಳಿಗೂ
ಅನಂತಕೋಟಿ ವಟವೃಕ್ಷ ಬ್ರಹ್ಮಾಂಡಗಳಿಗೂ
ಅನಂತಕೋಟಿ ಔದುಂಬರ ಬ್ರಹ್ಮಾಂಡಗಳಿಗೂ
ಇಂತಿವೆಲ್ಲಕ್ಕೂ ಆಲಯವಾಗಿರ್ದಾತನು ನೀನೆ ಅಯ್ಯಾ.
ಅದೆಂತೆಂದೊಡೆ:
ಆ ನಿರಾಳ ವೃಕ್ಷದ ಪಂಚಶಾಖೆಗಳೆ
ಪಂಚಲಿಂಗಮೂರ್ತಿಗಳು ನೋಡಾ.
ಅನಂತಕೋಟಿ ಬ್ರಹ್ಮರು, ಅನಂತಕೋಟಿ ವಿಷ್ಣುಗಳು
ಅನಂತಕೋಟಿ ದೇವೇಂದ್ರರು
ಎಂಬತ್ತೆಂಟುಕೋಟಿ ರಾಜಋಷಿಯರು
ಎಂಬತ್ತೆಂಟುಕೋಟಿ ಬ್ರಹ್ಮಋಷಿಯರು
ಎಂಬತ್ತೆಂಟುಕೋಟಿ ದೇವಋಷಿಯರು
ಇವರೆಲ್ಲ ಕೋಟಲೆಗೊಳಗು.
ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು
ನಂದಿವಾಹನ ರುದ್ರರು, ಗಂಗೆವಾಳುಕ ರುದ್ರರು
ಇವರೆಲ್ಲರು ಬುಡಮೇಲೆ ಹೂವು ಚಿಗುರು.
ಅಖಿಳ ಬ್ರಹ್ಮಾಂಡಗಳಲ್ಲಿಹ ಸಚರಾಚರಂಗಳು
ಇಂತೀ ಸಚರಾಚರಗಳು, ನಿತ್ಯಾನಂದ ವೃಕ್ಷವ ಸ್ವೀಕರಿಸಲರಿಯದೆ
ಮಾಯವಶವಾಗಿ ಸಾವುತ್ತ ಹುಟ್ಟುತ್ತಿಹ ಕಾರಣ
ಆನಂದಮೂಲ ಗುಣ ಪಲ್ಲವ ತತ್ವಶಾಖೆ
“ವೇದಾಂತ ಪುಷ್ಪ ಫಲ ಮೋಕ್ಷ ರಸಾದಿಪೂರ್ಣಂ
ಚೇತೋ ವಿಹಂಗ ಶಿವ ಕಲ್ಪತರು ವಿಹಾಯ
ಸಂಸಾರ ಶುಷ್ಕ ವಿಟಪಿಕಿವಿದಂ ಕರೋತಿ”
ಜೀವನೆಂಬ ಪಕ್ಷಿ ಭವದ ತರುವನಾಶ್ರಯಿಸಿದ
ಕಾರಣವೇನು ಹೇಳಾ
ಶೂನ್ಯನಾಥಯ್ಯ.
Art
Manuscript
Music
Courtesy:
Transliteration
Mahadādi tatvaṅgaḷigū pan̄casādākhyaṅgaḷigū
pan̄cakalegaḷigū mūvattaru tatvaṅgaḷigū
saptasamudraṅgaḷigū saptadvīpaṅgaḷigū
saptakulaparvataṅgaḷigū samastagraharāśigaḷigū
anantakōṭi gavāṁ brahmāṇḍagaḷigū
anantakōṭi kukkuṭa brahmāṇḍagaḷigū
anantakōṭi vaṭavr̥kṣa brahmāṇḍagaḷigū
anantakōṭi audumbara brahmāṇḍagaḷigū
intivellakkū ālayavāgirdātanu nīne ayyā.
Adentendoḍe:
Ā nirāḷa vr̥kṣada pan̄caśākhegaḷe
pan̄caliṅgamūrtigaḷu nōḍā.
Anantakōṭi brahmaru, anantakōṭi viṣṇugaḷu
anantakōṭi dēvēndraruEmbatteṇṭukōṭi rāja'r̥ṣiyaru
embatteṇṭukōṭi brahma'r̥ṣiyaru
embatteṇṭukōṭi dēva'r̥ṣiyaru
ivarella kōṭalegoḷagu.
Aṅgāla kaṇṇavaru, maiyella kaṇṇavaru
nandivāhana rudraru, gaṅgevāḷuka rudraru
ivarellaru buḍamēle hūvu ciguru.
Akhiḷa brahmāṇḍagaḷalliha sacarācaraṅgaḷu
intī sacarācaragaḷu, nityānanda vr̥kṣava svīkarisalariyade
Māyavaśavāgi sāvutta huṭṭuttiha kāraṇa
ānandamūla guṇa pallava tatvaśākhe
“vēdānta puṣpa phala mōkṣa rasādipūrṇaṁ
cētō vihaṅga śiva kalpataru vihāya
sansāra śuṣka viṭapikividaṁ karōti”
jīvanemba pakṣi bhavada taruvanāśrayisida
kāraṇavēnu hēḷā
śūn'yanāthayya.