ಚತುರ್ದಶ ಭುವನಂಗಳನು, ಆಖಿಳ ಬ್ರಹ್ಮಾಂಡಗಳನು
ಸಪ್ತ ಸಮುದ್ರಂಗಳನು, ಸಪ್ತದ್ವೀಪಂಗಳನು
ಸಪ್ತಕುಲಪರ್ವತಂಗಳನು, ಸಮಸ್ತ ಗ್ರಹರಾಶಿ ತಾರಾಪಥಂಗಳನು
ರಚಿಸಿದಾತನು ನೀನೆ ದೇವಾ.
ಅವೆಲ್ಲವನು ಸಂಹಿರಿಸುವಾತನೆ ನೀನೆ ದೇವಾ
ಸ್ತ್ರೀಲಿಂಗ ಪುಲ್ಲಿಂಗ ನಪುಂಸಕಲಿಂಗವೆಂಬ ಈ ತ್ರಿವಿಧದಿಂದ
ಹದಿನಾಲ್ಕು ಭುವನದೊಳಗಿರುವ ಸಚರಾಚರ[ವ]
ನಿನ್ನ ಮಾಯೆಯ ಕೈಯಿಂದಾಗುಮಾಡಿದೆಯಯ್ಯ
ಶೂನ್ಯನಾಥ.
Art
Manuscript
Music
Courtesy:
Transliteration
Caturdaśa bhuvanaṅgaḷanu, ākhiḷa brahmāṇḍagaḷanu
sapta samudraṅgaḷanu, saptadvīpaṅgaḷanu
saptakulaparvataṅgaḷanu, samasta graharāśi tārāpathaṅgaḷanu
racisidātanu nīne dēvā.
Avellavanu sanhirisuvātane nīne dēvā
strīliṅga pulliṅga napunsakaliṅgavemba ī trividhadinda
hadinālku bhuvanadoḷagiruva sacarācara[va]
ninna māyeya kaiyindāgumāḍideyayya
śūn'yanātha.