Index   ವಚನ - 13    Search  
 
ಜಂಗಮವಾದರೆ ಮತ್ತೆ ಹೇಂಗಿರಬೇಕೆಂದಡೆ, ಸರ್ವಪ್ರಾಣಿಗಳಲ್ಲಿ ಕೃಪೆ ಶಾಂತಿ ನಿರಾಪೇಕ್ಷ ನಿರ್ವಿಕಾರ ಶಮೆ ದಮೆ ಹರುಷ ನಿರ್ವೈರ, ಅವಾಗಳೂ ಸಮತೆ ಸೈರಣೆ ದಯ ಪರತತ್ವ ವಿದ್ಯೆ ವಿಚಾರ ಪರಮಾನಂದ ಪ್ರಸಂಗ ನಿಸ್ಪೃಹರಲ್ಲಿ ವಿನಯ ಸರ್ವಾಚಾರಸಂಪತ್ತಿನಲ್ಲಿ ನಿರುತನಾಗಿ ಸದ್ಭಕ್ತ ಮಾಹೇಶ್ವರರಿಗೆ ಬೋಧಿಸುತ್ತ ಜಗಹಿತಾರ್ಥವಾಗಿ ಚರಿಸುವ ಕೃಪಾಮೂರ್ತಿಯೆ ಜಂಗಮ ನೋಡಾ. “ಘ್ರಾಣ ದೃಷ್ಟಿ ಘ್ರಾಣ ವಾಕ್ಯಂ| ಘ್ರಾಣ ಮೂರ್ತಿ ನಿರಂತರಂ| ಕ್ರಿಯಾ ಕರ್ಮ ಸ್ವಕರ್ಮಜ್ಞಾ ಶಿಕ್ಷಾಚಾರಂತು ಜಂಗಮಃ|| ಅಂತಪ್ಪ ಜಂಗಮಕ್ಕೆ ಶರಣೆಂದು ಬದುಕಿದೆನು ಕಾಣಾ ಶೂನ್ಯನಾಥಯ್ಯ.