Index   ವಚನ - 11    Search  
 
ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ. ಅರಿದರಿದು, ಬಿಲುಗಾರನಹೆಯೊ! ಎಸೆದಿಬ್ಬರು ಒಂ[ದಾ]ಹರು ಗಡ. ಇದು ಹೊಸತು, ಚೋದ್ಯವೀ ಸರಳ ಪರಿ ನೋಡಾ! ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು. ನಾವಿಬ್ಬರೊಂದಾಗೆ ಬಿಲ್ಲಾಳಹೆ, ಎಸೆಯೆಲೋ ಕಾಮಾ.