Index   ವಚನ - 13    Search  
 
ಉಂಡೆಹೆನೆಂಬಲ್ಲಿ ಅನ್ನವನಿಕ್ಕದೆ ಸತ್ತ ಮತ್ತೆ, ಅಕ್ಕಿಯ ಹೇರ ಮಸ್ತಕದಲ್ಲಿರಿಸಿ, ಘಟ್ಟಿ ತುಪ್ಪ ತೋಯ ಉಣ್ಣೆಂದು ಬಿಕ್ಕಿ ಬಿಕ್ಕಿ ಅಳುವನಂತೆ, ಇವರಚ್ಚುಗದ ಭಕ್ತಿಯ ಕಂಡು ಮೆಚ್ಚನಯ್ಯಾ, ಎನ್ನ ಉರಿಲಿಂಗತಂದೆ.