Index   ವಚನ - 32    Search  
 
ನಲ್ಲನ ಕೂಡುವ ಭರದಲ್ಲಿ ಎನ್ನುವನಿದಿರುವನೇನೆಂದರಿಯೆನು. ನಲ್ಲನ ಕೂಡುವಾಗಳೂ ಎನ್ನುವ ನಲ್ಲನನೇನೆಂದರಿಯೆನು. ಉರಿಲಿಂಗದೇವನ ಕೂಡಿದ ಬಳಿಕ ನಾನೊ ತಾನೊ ಏನೆಂದರಿಯೆನು.