ಅಂತರಂಗ ಬಹಿರಂಗವೆಂದೆಂಬರು,
ಆವುದು ಮುಂದು ಆವುದು ಹಿಂದೆಂದರಿಯರು.
ಎಳ್ಳೊಳಗಣ ಎಣ್ಣೆ ಕಲ್ಲೊಳಗಣ ಹೇಮ ಹಾಲೊಳಗಣ ತುಪ್ಪ
ಕಾಷ್ಠದೊಳಗಣ ಅಗ್ನಿಯಿಪ್ಪಂತಿಪ್ಪ ಚಿನುಮಯ ಮೂರ್ತಿಯನೂ
ಶ್ರೀಗುರು ಹಸ್ತಾಬ್ಜಮಂ ಶಿಷ್ಯನ ಮಸ್ತಕದಲ್ಲಿಟ್ಟು
ಆಕರ್ಷಣಂ ಮಾಡಿ ತೆಗೆದು ತಲ್ಲಿಂಗವನಂಗದಲ್ಲಿ ಸ್ಥಾಪ್ಯವಂ ಮಾಡಿ
ಸುಜ್ಞಾನಕ್ರೀಯ ಉಪದೇಶವಂ ಮಾಡಲು
ಘಟದ ಹೊರಗಿಹ ಆನಲನೂ ಆ ಘಟವ ಭೇದಿಸಿ
ತಜ್ಜಲವ ಹಿಡಿದು ತೆಗೆದುಕೊಂಬಂತೆ
ಬಾಹ್ಯದಿಂ ಮಾಡುವ ಸತ್ಕ್ರಿಯಾವರ್ತನದಿಂ
ಜೀವಶಿವ ಸಂಗವಹ ಬಟ್ಟೆಯನರಿಯದೆ
ಹಲವು ಬಟ್ಟೆಯಲ್ಲಿ ಹರಿವರು,
ಅಜ್ಞಾನಸಂಬಂಧಿಗಳು, ಗುರುವಚನಪರಾಙ್ಮುಖರು,
ಕರ್ಮನಿರ್ಮಲವಾಗದ ಜಡರುಗಳು, ಲಿಂಗನಿಷ್ಠಾವಿರಹಿತರು,
ನಿಮ್ಮನೆತ್ತಬಲ್ಲರಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Antaraṅga bahiraṅgavendembaru,
āvudu mundu āvudu hindendariyaru.
Eḷḷoḷagaṇa eṇṇe kalloḷagaṇa hēma hāloḷagaṇa tuppa
kāṣṭhadoḷagaṇa agniyippantippa cinumaya mūrtiyanū
śrīguru hastābjamaṁ śiṣyana mastakadalliṭṭu
ākarṣaṇaṁ māḍi tegedu talliṅgavanaṅgadalli sthāpyavaṁ māḍi
sujñānakrīya upadēśavaṁ māḍalu
ghaṭada horagiha ānalanū ā ghaṭava bhēdisi
Tajjalava hiḍidu tegedukombante
bāhyadiṁ māḍuva satkriyāvartanadiṁ
jīvaśiva saṅgavaha baṭṭeyanariyade
halavu baṭṭeyalli harivaru,
ajñānasambandhigaḷu, guruvacanaparāṅmukharu,
karmanirmalavāgada jaḍarugaḷu, liṅganiṣṭhāvirahitaru,
nim'manettaballarayya uriliṅgapeddipriya viśvēśvarā.