ಅಕಾರ ಉಕಾರ ಮಕಾರಂಗಳು
ಪ್ರಕೃತಿಯಲ್ಲಿ ನಾದ ಬಿಂದು ಕಳೆಯಾದವು.
ಅಕಾರ ನಾದ, ಉಕಾರ ಬಿಂದು, ಮಕಾರ ಕಳೆ.
ಅಕಾರ ರುದ್ರ, ಉಕಾರ ಈಶ್ವರ, ಮಕಾರ ಸದಾಶಿವ.
ಅಕಾರ ಉಕಾರ ಮಕಾರಂಗಳಿಗೆ ನಾದ ಬಿಂದು ಕಳೆಯೇ ಆಧಾರ.
ನಾದ ಬಿಂದು ಕಳೆಗಳಿಗೆ ಪ್ರಕೃತಿಯೇ ಆಧಾರ.
ಆ ಪ್ರಾಣಕ್ಕೆ ಲಿಂಗವೇ ಆಧಾರ.
ಅ ಎಂಬಲ್ಲಿ ನಾದವಾಯಿತ್ತು. ಉ ಎಂಬಲ್ಲಿ ನಾದ ಉಳಿದಿತ್ತು.
ಮ ಎಂಬಲ್ಲಿ ಬಿಂದು ಒಂದುಗೂಡಲು
ಓಂಕಾರಶಕ್ತಿಯಾಗಿ ತೋರಿತ್ತು.
ಆ ಓಂಕಾರಶಕ್ತಿಯಲ್ಲಿ ನಕಾರ ಮಕಾರ ಶಿಕಾರ ವಕಾರ
ಯಕಾರಗಳೆಂಬ ಪಂಚಾಕ್ಷರಗಳುದಯಿಸಿದವು.
ನಕಾರವೇ ಬ್ರಹ್ಮ, ಮಕಾರವೇ ವಿಷ್ಣು, ಶಿಕಾರವೇ ರುದ್ರ,
ವಕಾರವೇ ಈಶ್ವರ, ಯಕಾರವೇ ಸದಾಶಿವ.
ಈ ಪಂಚ ಶಾಖೆಗಳ
ವಕಾರವೇ ದೇವನ ನೆತ್ತಿಯಲ್ಲಿ
ಆ ಓಂಕಾರ ಶಕ್ತಿ ಸ್ವರೂಪಿಯಾಗಿ ಕಾಣಿಸಿತ್ತು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Akāra ukāra makāraṅgaḷu
prakr̥tiyalli nāda bindu kaḷeyādavu.
Akāra nāda, ukāra bindu, makāra kaḷe.
Akāra rudra, ukāra īśvara, makāra sadāśiva.
Akāra ukāra makāraṅgaḷige nāda bindu kaḷeyē ādhāra.
Nāda bindu kaḷegaḷige prakr̥tiyē ādhāra.
Ā prāṇakke liṅgavē ādhāra.
A emballi nādavāyittu. U emballi nāda uḷidittu.
Ma emballi bindu ondugūḍalu
ōṅkāraśaktiyāgi tōrittu.Ā ōṅkāraśaktiyalli nakāra makāra śikāra vakāra
yakāragaḷemba pan̄cākṣaragaḷudayisidavu.
Nakāravē brahma, makāravē viṣṇu, śikāravē rudra,
vakāravē īśvara, yakāravē sadāśiva.
Ī pan̄ca śākhegaḷa
vakāravē dēvana nettiyalli
ā ōṅkāra śakti svarūpiyāgi kāṇisittu.
Uriliṅgapeddipriya viśvēśvarā.