Index   ವಚನ - 32    Search  
 
ಅರಿಷಡ್ವರ್ಗದುರವಣಿಗೆಗೊಳಗಾಗನಾಗಿ ಭಕ್ತಕಾಯನಾದ. ಪಂಚೇಂದ್ರಿಯದ ಬಳಿ ಸಲ್ಲನಾಗಿ ಗುರುಭಕ್ತನಾದ. ಸಪ್ತಧಾತುವಿನ ಗುಣವಿಡಿಯನಾಗಿ ಸಮಯಾಚಾರಿಯಾದ. ಅಷ್ಟಮದಗಜದ ಬಟ್ಟೆಯ ಮೆಟ್ಟನಾಗಿ ಆಚಾರವಂತನಾದ. ಕರ್ಮಕಾಯದಲ್ಲಿ ಬಳಿಸಲ್ಲನಾಗಿ ನಿರ್ಮಲ ನಿತ್ಯಸತ್ಯನಾದ. ಜ್ಞಾನಕಾಂಡದಲ್ಲಿ ಹೊಣೆಹೊಕ್ಕನಾಗಿ ಸೃಷ್ಟಿಯೊಳಗೆ ಭಕ್ತಿ ಎಂಬ ಅಚ್ಚಾದ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.