Index   ವಚನ - 36    Search  
 
ಅಷ್ಟಾಷಷ್ಠಿತೀರ್ಥಂಗಳ ಮೀಯಲ್ಕೆ ಆತ ಹಿರಿಯನೇ? ಅಲ್ಲ, ಆತನ ಅಂತಃಕರಣ ಶುದ್ಧವಿಲ್ಲಾಗಿ. ಸಂಧ್ಯಾ ಸಮಾಧಿ ಜಪ ತಪ ಮಂತ್ರರೂಢನಾಗಿರಲಿಕೆ ಆತ ಹಿರಿಯನೇ? ಅಲ್ಲ, ಆತನ ಮನ ಶುದ್ಧವಿಲ್ಲಾಗಿ. ವಚನಾರಂಭದಲ್ಲಿ ನುಡಿಗಲಿತಲ್ಲಿ ಆತನನುಭವಿಯೆ? [ಅಲ್ಲ] ಆತ ಇದಿರ ಬೋಧಿಸುವ ಭುಂಜಕನಾಗಿ. ಕೋಪವೇ ರಾಶಿ, ಕುಟಿಲವೇ ಲಚ್ಚಣ, ಸಟೆಯೇ ಕೊಳಗ, ಮಾಯವೇ ಅಳತೆ, ಅರಿಷಡ್ವರ್ಗ ಪಂಚೇಂದ್ರಿಯವಿಡಿದಾಡುವನ್ನಕ್ಕ ಭಕ್ತನೇ? ಭಕ್ತನಲ್ಲ. ಭಕ್ತನ ನಡೆ ಪಾವನ, ನುಡಿಯೇ ತೀರ್ಥ, ಒಡಲೇ ಕ್ಷೇತ್ರ. ನಿಮ್ಮ ಶರಣರ ಅಂಗಳವೇ ವಾರಣಾಸಿ, ಕೇವಲ ದಾಸೋಹವೇ ಕರ್ತವ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.