ಆದಿಲಿಂಗ ಅನಾದಿಶರಣನೆಂಬುದು
ತನ್ನಿಂದ ತಾನಾಯಿತ್ತು ಕೇಳಿರಣ್ಣಾ.
ಆದಿ ಕಾಯ, ಅನಾದಿ ಪ್ರಾಣ,
ಈ ಉಭಯದ ಭೇದವ ತಿಳಿದು ವಿಚಾರಿಸಿ ನೋಡಿರಣ್ಣಾ.
ಅಂತು ಅನಾದಿಯ ಪ್ರಸಾದ ಆದಿಗೆ ಸಲುವುದು. ಅದೆಂತೆಂದಡೆ,
ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್|
ಅನಾದೇಶ್ಚ ವಿರೋಧೇನ ತದುಚ್ಛಿಷ್ಟಂ ತು ಕಿಲ್ಬಿಷಂ
ಇಂತೆಂದುದಾಗಿ,
ಪ್ರಾಣಪ್ರಸಾದವಿರೋಧವಾಗಿ ಪಿಂಡಪ್ರಸಾದವ ಕೊಂಡಡೆ
ಕೊಂಡುದು ಕಿಲ್ಬಿಷ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Ādiliṅga anādiśaraṇanembudu
tanninda tānāyittu kēḷiraṇṇā.
Ādi kāya, anādi prāṇa,
ī ubhayada bhēdava tiḷidu vicārisi nōḍiraṇṇā.
Antu anādiya prasāda ādige saluvudu. Adentendaḍe,
anādijaṅgamaścaiva ādiliṅgasthalaṁ bhavēt|
anādēśca virōdhēna taducchiṣṭaṁ tu kilbiṣaṁ
intendudāgi,
prāṇaprasādavirōdhavāgi piṇḍaprasādava koṇḍaḍe
koṇḍudu kilbiṣa, uriliṅgapeddipriya viśvēśvarā