Index   ವಚನ - 55    Search  
 
ಇಚ್ಛೆಯರಿದು, ಕಾಲಕಾಲದಲ್ಲೂ ಇಚ್ಛೆಯ ಸಲಿಸಿ, ನಿರುಪಾಧಿಕ ದಾಸೋಹವ ಮಾಡಿ, ಶಿವನಾನೆಂಬ ಅಹಂಕಾರವಡಗಿದಡೆ ಭಕ್ತನು. ಮಹಾವಸ್ತುಗಳ ಆವ ಕಾಲ ಆವ ಹೊತ್ತು ಆತ ಬೆಸಸಿತ್ತುದ ಮಹಾಪ್ರಸಾದವೆಂದು, ಪ್ರತ್ಯುತ್ತರವಿಲ್ಲದೆ ಆಜ್ಞೆಯಲ್ಲಿ ನಡೆದು, ಆಜ್ಞೆಯಲ್ಲಿ ನುಡಿದು ಇರಬಲ್ಲಡೆ ಆತನೇ ಭಕ್ತನು. ಈ ಸದ್ಭಕ್ತಿ ಬಸವಣ್ಣಂಗಲ್ಲದೆ ಸರ್ವಬ್ರಹ್ಮಾಂಡದೊಳಗಣ ಸರ್ವಲೋಕದ ದೇವ ದಾನವ ಮಾನವರಾರಿಗೂ ಅಳವಡದು, ಆರಿಗೂ ಆಗದು. ಸದ್ಭಕ್ತಿ ಬಸವಣ್ಣಂಗಳವಟ್ಟಿತ್ತು, ಬಸವಣ್ಣನೇ ಭಕ್ತನು, ಬಸವಣ್ಣನ ನೆನೆವುದೇ ಭಕ್ತಿಯ ಪಥವು, ಬಸವಣ್ಣನ ನೆನೆವುದೇ ಮುಕ್ತಿಯ ಪಥವು, ಬಸವಣ್ಣನ ನೆನೆದು ಬದುಕಿದೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.