Index   ವಚನ - 56    Search  
 
ಇನ್ನು ಮುಕ್ತನೆಂದಡೆ ಮುನ್ನಲೇನು ಬದ್ಧನೇ? ಮುನ್ನ ಮುನ್ನವೇ ಮುಕ್ತನು. ಒಂದು ಕಾರಣದಿಂದ ಬದ್ಧನಾದಡೇನು? ಗುರುಕರುಣದಿಂದ ಮುಕ್ತನು. ಗುರುಕರುಣದಿಂದ ಗುರುವಾದ ಬಳಿಕ ಬದ್ಧ-ಮುಕ್ತನೆಂಬ ದಂದುಗದ ನುಡಿ ಹೊದ್ದಲುಂಟೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.