ಓಂ ನಮಃ ಶಿವಾಯ ಓಂ ನಮಃ ಶಿವಾಯ
ಎನ್ನದಿದ್ದಡೆ ಬಂಧನ,
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಎಂದಡೆ ಮೋಕ್ಷ, ಅದೆಂತೆಂದಡೆ:
'ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ
ತನ್ಮಂತ್ರಜಪತೋ ಭಕ್ತ್ಯಾ ಸದ್ಯೋ ಮೋಕ್ಷೋ ನ ಸಂಶಯಃ'
ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯಾ,
ಬಂಧನ ಮೋಕ್ಷವು ಓಂ ನಮಃ ಶಿವಾಯ.
Art
Manuscript
Music
Courtesy:
Transliteration
Ōṁ namaḥ śivāya ōṁ namaḥ śivāya
ennadiddaḍe bandhana,
ōṁ namaḥ śivāya ōṁ namaḥ śivāya
endaḍe mōkṣa, adentendaḍe:
'Ṣaḍakṣarajapānnāsti sarvēṣāṁ bandhanaṁ tathā
tanmantrajapatō bhaktyā sadyō mōkṣō na sanśayaḥ'
endudāgi, uriliṅgapeddipriya viśvēśvarayyā,
bandhana mōkṣavu ōṁ namaḥ śivāya.