ಕಕ್ಷೆ ಕರಸ್ಥಲ ಉತ್ತಮಾಂಗ ಉರಸ್ಥಲ
ಮೊದಲಾದ ಸ್ಥಾನಂಗಳಂ ಶುದ್ಧವ ಮಾಡಿ,
``ಯಾ ತೇ ರುದ್ರ ಶಿವಾತನೂರಘೋರಾ[s] ಪಾಪಕಾಶಿನೀ
ಎಂಬ ಶಿವಲಿಂಗಮೂರ್ತಿಯಂ ಸ್ಥಾಪಿಸಿ,
ತತ್ಶಿಷ್ಯನ ಶರೀರವೆ ನಡೆದೇವಾಲಯವೆಂಬಂತೆ
ಶ್ರೀಗುರು ಪಾವನವ ಮಾಡಿ ತೋರಿದನಾಗಿ
ಅಂಗದ ಮೇಲೆ ಲಿಂಗವುಳ್ಳವರ ಕಂಡು ಮರಳಿ ಮಾನವರೆಂದಡೆ
ನಾಯಕನರಕ ತಪ್ಪದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.