Index   ವಚನ - 91    Search  
 
ಕಾಮ ಕ್ರೋಧ ಲೋಭ ಮೋಹಾದಿಗಳ ಆಗರವೆನಿಪ ಒಡಲ ಒಡತಿ ಎಳದೊಯ್ಯುತ್ತಿರಲು ವಾಗದ್ವೈತವಾ ಬೊಮ್ಮವೆಂಬೆನು. ಆಗಳೂ ಇಂದ್ರಿಯಂಗಳ ಬೆನ್ನಲಿ ಹರಿವುತ್ತ `ಸೋ[s]ಹಂ' ಎಂಬರಿವನರಿಯದೆ ಶಿವಜ್ಞಾನ ಮೊಗೆಯದೆ ವಾಗದ್ವೈತದಲ್ಲಿ ಹುರುಳಿಲ್ಲ. ನಂಬು, ಸುಖಸಾರಾಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.