ಗುರುತ್ವವುಳ್ಳ ಮಹದ್ಗುರುವನರಿಯದೆ
ನಾನು ಗುರು ತಾನು ಗುರುವೆಂದು ನುಡಿವಿರಿ.
ಧನದಲ್ಲಿ ಗುರುವೆ? ಮನದಲ್ಲಿ ಗುರುವೆ? ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ?
ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ?
ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ?
ದೀಕ್ಷೆಯಲ್ಲಿ ಗುರುವೆ? ಶಿಕ್ಷೆಯಲ್ಲಿ ಗುರುವೆ?
ಸ್ವಾನುಭಾವದಲ್ಲಿ ಗುರುವೆ? ಮಾತಾಪಿತರಲ್ಲಿ ಗುರುವೆ?
ದೇವದಾನವ ಮಾನವರೆಲ್ಲರು ನೀವೆಲ್ಲರು
ಆವ ಪರಿಯಲ್ಲಿ ಗುರು ಹೇಳಿರಣ್ಣಾ?
ಗುರುವಾರು ಲಘುವಾರೆಂದರಿಯರಿ,
ಮನ ಬಂದಂತೆ ನುಡಿದು ಕೆಡುವಿರಾಗಿ.
ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ
ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ
ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು.
ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು
ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು
ಮಹಾಸಂವಾದದಿಂದ ಅತಿತರ್ಕವ ಮಾಡಿ
ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ,
ಆ ಸಭಾಮಧ್ಯದಿ ಪರಮಾಕಾಶದಿ
`ಅತ್ಯತಿಷ್ಠದ್ದಶಾಂಗುಲನೆಶಾಂಗುನಿಪʼ ಮದ್ಗುರುವಪ್ಪ ಮಹಾಲಿಂಗವು
ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು
ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು?
ಈ ಪುರುಷನ ನೋಡುವ,
ಈ ಪುರುಷನಿಂದ ನಮ್ಮಲ್ಲಿ
ಆರು ಘನ ಆರು ಗುರುವೆಂದು ಕೇಳುವೆವೆಂದು
ಆ ಮಹಾಪುರುಷನ ಸಮೀಪಕ್ಕೆ
ಅಗ್ನಿ ವಾಯು ಮೊದಲಾಗಿಹ
ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು
ಅತ್ಯತಿಷ್ಠದ್ದಶಾಂಗುಲಮಾಗಿರ್ದು
ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು
ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು.
ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ.
ಧನದಲ್ಲಿ ಗುರುವೆ?
ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ,
ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು,
ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು,
ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು,
ಮಹದೈಶ್ವರ್ಯ ಉಳ್ಳವಂಗೆ
ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ
ಮಹದೈಶ್ವರ್ಯವುಳ್ಳ ಇಂದ್ರನೆ ಗುರು.
ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು,
ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ
ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು,
ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು,
ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು.
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ|
ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ||
ಎಂದುದಾಗಿ,
ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ
ಶ್ರೀಗುರುವೆ ಗುರು ಕಾಣಿರೆ.
ಮನದಲ್ಲಿ ಗುರುವೇ?
ನೀವೆಲ್ಲರು ದುರ್ಮನಸ್ಸಿಗಳು
ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ.
ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ
ಸುಜ್ಞಾನಪದವ ತೋರುವ
ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ.
ತನುವಿನಲ್ಲಿ ಗುರುವೆ?
ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ
ಜನಿಸುವ ಅನಿತ್ಯತನು ನಿಮಗೆ.
ಇಂತಪ್ಪ ತನುವನುಳ್ಳವರ
ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ
ಪಂಚಭೂತತನುವ ಕಳೆದು, ಶುದ್ಧತನುವ ಮಾಡಿ
ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ
ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ
ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ.
ವಿದ್ಯೆಯಲ್ಲಿ ಗುರುವೆ?
ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ,
ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ,
ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ,
ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ
ಅವರ ತಾತ್ಪರ್ಯವನರಿಯರಿ,
ಅಷ್ಟಾದಶವಿದ್ಯೆಗಳ ಮರ್ಮವನರಿಯರಿ.
ವೇದಂಗಳು,
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದವು.
ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ,
`ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ'
ಎಂದವು,
ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ,
ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ,
ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ,
ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು.
ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು
`ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃʼ
ಎಂದುದಾಗಿ.
`ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃʼ
ಎಂದುದಾಗಿ,
`ಈಶಾನಸ್ಸರ್ವವಿದ್ಯಾನಾಂʼ
ಎಂದುದಾಗಿ,
ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ
ವಿದ್ಯೆಯಲ್ಲಿ ಗುರು ಕಾಣಿರೆ,
ದೀಕ್ಷೆಯಲ್ಲಿ ಗುರುವೇ?
ನೀವು `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬಿರಿ,
ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ.
ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ.
ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ
ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ
ಉಪದೇಶವ ಮಾಡಿದನು.
ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ.
ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ
ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ.
ಶಿಕ್ಷೆಯಲ್ಲಿ ಗುರುವೇ?
ನಿಮಗೆ ಶಿಕ್ಷಾಸತ್ವವಿಲ್ಲ.
ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ.
ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು.
ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ|
ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ||
ಎಂದುದಾಗಿ,
ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ|
ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ||
ಎಂದುದಾಗಿ,
ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ
ಮದ್ಗುರುವೇ ಗುರು ಕಾಣಿರೆ.
ಸ್ವಾನುಭಾವದಲ್ಲಿ ಗುರುವೆ?
ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ
ಸ್ವಾನುಭಾವ[ರಹಿತರಾದಿರಿ].
ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ
ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು.
ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ
ಎಮ್ಮ ಪರಶಿವಮೂರ್ತಿ ಮಹದ್ಗುರು(ವೇ)ಸ್ವಾನುಭಾವದಲ್ಲಿ ಗುರು ಕಾಣಿರೆ.
ಮಾತಾಪಿತರ ಗುರುವೆಂಬಿರಿ,
ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ.
ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ.
ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ|
ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ||
`ಜನಿತೋಥವಿಷ್ಣೋಃʼ
ಎಂದುದಾಗಿ,
`ಶಿವೋ ಮಮೈವ ಪಿತಾʼ
ಎಂದುದಾಗಿ,
ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ
ಮಹಾಸದ್ಗುರುವೇ ಗುರು ಕಾಣಿರೊ.
ಭಕ್ತಿಯಲ್ಲಿ ಗುರುವೆ?
ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು.
ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು
ತನು ಮನ ಧನವನರ್ಪಿಸಿ ಉಂಡು ಉಣಿಸಿ
ಆಡಿ ಹಾಡಿ ಸುಖಿಯಾದರು ಶರಣರು.
ಇಂತಹ ಶರಣಭರಿತ ಸದಾಶಿವಮೂರ್ತಿ
ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ.
ಜ್ಞಾನದಲ್ಲಿ ಗುರುವೇ?
ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು.
ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ
ಅಹಂಕಾರದಿಂ ಲಘುವಾದಿರಿ.
ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ
ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು
ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ
ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ.
ವೈರಾಗ್ಯದಲ್ಲಿ ಗುರುವೆ?
ನೀವು ಆಶಾಬದ್ಧರು,
ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು.
ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ
ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ.
ಇದು ಕಾರಣ,
ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ
ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ
ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ
ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ
ಮಹಾಸದ್ಗುರುವೇ ಗುರು ಕಾಣಿರೆ.
`ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ,
ಮಹಾಘನತರವಪ್ಪ ಪರಶಿವಮೂರ್ತಿ
ಮಹಾಸದ್ಗುರುವೇ ಗುರು ಕಾಣಿರೆ.
ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋರ್ದ್ವಯಂ|
ಅಂತರ್ನಿಧಾಯ ವರ್ತೇSಹಂ ಗುರುರೂಪೋ ಮಹೇಶ್ವರಿ||
ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು.
ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ
ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ
ಎಮ್ಮ ಗಣನಾಥದೇವರೇ ಗುರು ಕಾಣಿರೆ.
ಇದು ಕಾರಣ,
ಶರಣಮೂರ್ತಿ ಶ್ರೀಗುರು.
ಶ್ರೀಗುರು ಲಿಂಗ ಜಂಗಮ ಒಂದೆಯಾಗಿ
ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು.
ಪರಶಿವಲಿಂಗವೇ ಗುರು, ಉಳಿದವೆಲ್ಲವೂ
Art
Manuscript
Music
Courtesy:
Transliteration
Gurutvavuḷḷa mahadguruvanariyade
nānu guru tānu guruvendu nuḍiviri.
Dhanadalli guruve? Manadalli guruve? Tanuvinalli guruve? Nityadalli guruve?
Vidyeyalli guruve? Bhaktiyalli guruve?
Jñānadalli guruve? Vairāgyadalli guruve?
Dīkṣeyalli guruve? Śikṣeyalli guruve?
Svānubhāvadalli guruve? Mātāpitaralli guruve?
Dēvadānava mānavarellaru nīvellaru
āva pariyalli guru hēḷiraṇṇā?
Guruvāru laghuvārendariyari,
Mana bandante nuḍidu keḍuvirāgi.
Haribrahmaru gurutvakke sanvādisi
mahadguruvappa paran̄jyōtirliṅgada
ādimadhyāvasānada kālavanariyade laghuvāgi hōdaru.
Mattaṁ adom'me viṣṇvādi dēvajātigaḷellarū neredu
nā ghana, tā ghana, nānu guru, tānu guruvendu
mahāsanvādadinda atitarkava māḍi
gurutvavuḷḷa puruṣana niścaisalariyade,
ā sabhāmadhyadi paramākāśadi
`Atyatiṣṭhaddaśāṅgulaneśāṅgunipaʼ madguruvappa mahāliṅgavu
ivarugaḷa ajñānava kaṇḍu mahāviparītakrīyalli nagutiralu
nam'mellaranū nōḍi naguva puruṣanāru?
Ī puruṣana nōḍuva,
ī puruṣaninda nam'malli
āru ghana āru guruvendu kēḷuvevendu
ā mahāpuruṣana samīpakke
agni vāyu modalāgiha
dēvajātigaḷellarū pratyēkarāgi hōgalu
atyatiṣṭhaddaśāṅgulamāgirdu
Ivarugaḷa gurutvavellavanū ondē tr̥ṇadalli muridu
tr̥ṇadindavū kaṣṭa laghutvava māḍidanu.
Idu kāraṇa, paraśivane madguru kāṇire.
Dhanadalli guruve?
Nīvellaru dhanadalli guruvembaḍe nīvu kēḷire,
kāṇivuḷḷavaṅge śatasaṅkhye uḷḷavane guru,
śatasaṅkhye uḷḷavaṅge sahasrasaṅkhye uḷḷavane guru,
sahasrasaṅkhye uḷḷavaṅge mahadaiśvarya uḷḷavane guru,
mahadaiśvarya uḷḷavaṅge
kāmadhēnu kalpavr̥kṣa cintāmaṇi modalāda
mahadaiśvaryavuḷḷa indrane guru.
Indraṅge anūnaiśvaryavanuḷḷa brahmane guru,
Ā brahmaṅge aiśvaryakke adhidēvateyappa
mahālakṣmiyanuḷḷa viṣṇuve guru,
ā viṣṇuviṅge aṣṭamahadaiśvaryavanuḷḷa rudrane guru,
ā rudraṅge īśvarane guru, īśvaraṅge sadāśivane guru.
Brahmā viṣṇuśca rudraśca īśvaraśca sadāśivaḥ|
yē tē garbhagatā yasya tasmai śrīguravē namaḥ||
endudāgi,
antaha sadāśivaṅge em'ma paraśivamūrti
śrīguruve guru kāṇire.
Manadalli guruvē?
Nīvellaru durmanas'sigaḷu
paradhana parastrī an'yadaivakke āse māḍuviri.
Intaha durmanas'sinavaranū sumanava māḍi
sujñānapadava tōruva
paraśivamūrti śrīguruve guru kāṇire.
Tanuvinalli guruve?
Janana maraṇa embattunālku lakṣa yōniyalli
janisuva anityatanu nimage.
Intappa tanuvanuḷḷavara
Pūrvajātana kaḷedu, śud'dhatanuva māḍi
pan̄cabhūtatanuva kaḷedu, śud'dhatanuva māḍi
bhaktakāya mamakāyavendu śivanuḍidantaha
prasādakāyava māḍi nityasukhadoḷirisida
paraśivamūrti śrīguruvē guru kāṇire.
Vidyeyalli guruve?
Nīvellaru vēdada ballaḍe, śāstravanariyari,
vēdaśāstrava ballaḍe, purāṇavanariyari,
vēdaśāstrapurāṇava ballaḍe, āgamavanariyari,
vēdaśāstrapurāṇa āgamana ballaḍe
avara tātparyavanariyari,
Aṣṭādaśavidyegaḷa marmavanariyari.
Vēdaṅgaḷu,
`ēka ēva rudrō na dvitīyāya tasthē' endavu.
Adannariyari nīvu, an'yavuṇṭembiri,
`śiva ēkō dyēyaḥ śivaśaṅkaraḥ sarvaman'yatparityājyaṁ'
endavu,
nīvu an'yava dhyānisuviri, an'yava pūjisuviri, vidye nimagilla,
nimage hēḷikoḍuva vyāsādigaḷigilla,
avarige adhikanāgiha viṣṇubrahmādigaḷigilla,
vēdādi aṣṭādaśavidyegaḷa śivane ballanu.
Sarvavidyegaḷanū śivanē māḍidanu, śivanē kartanu
`ādikartā kavis'sākṣāt śūlapāṇiritiśrutiḥʼ
Endudāgi.
`Namō mantriṇē vāṇijāya kakṣāṇāṁ katayē namaḥʼ
endudāgi,
`īśānas'sarvavidyānāṁʼ
endudāgi,
vidyārūpanappa em'ma paraśivamūrti śrīguruvē
vidyeyalli guru kāṇire,
dīkṣeyalli guruvē?
Nīvu `varṇānāṁ brāhmaṇō guruḥ' embiri,
ā viṣṇuva bhajisi viṣṇuvē guruvembiri.
Antaha viṣṇuviṅgeyū upaman'yu guru kāṇire.
Antaha upaman'yu modalāda dēva'r̥ṣi brahma'r̥ṣi rāja'r̥ṣi
dēvajāti mānavajātigaḷige paraśivanācāryanāgi
Upadēśava māḍidanu.
Vēdaśāstra āgama purāṇaṅgaḷalli, vicārisi nōḍire.
Adu kāraṇa mahācāryanu mahādīkṣitanappa
em'ma paraśivamūrti mahāsadguruvē guru kāṇire.
Śikṣeyalli guruvē?
Nimage śikṣāsatvavilla.
Vīrabhadra dūrvāsa gautamādigaḷiṁ nīvellā śikṣegoḷagādiri.
Śikṣāmūrti caraliṅgavāgi śikṣisi rakṣisidanu paraśivanu.
Yē rudralōkādavatīrya rudrā mānuṣyamāśritya jagad'dhitāya|
caranti nānāvidhacārucēṣṭāstēbhyō namastryambakapūjakēbhyaḥ||
endudāgi,
Daṇḍakṣīradvayaṁ hastē jaṅgamō bhaktimandiraṁ|
atibhaktyā liṅgasantuṣṭirapahāsyaṁ yamadaṇḍanaṁ||
endudāgi,
śikṣeyalli guru em'ma paraśivamūrti
madguruvē guru kāṇire.
Svānubhāvadalli guruve?
Nīvu dēvadānavamānavarellaru dēhaguṇaviḍidu madāndharāgi
svānubhāva[rahitarādiri].
Skanda nandi vīrabhadra bhr̥ṅginātha basavarāja
modalāda em'ma māhēśvararē svānubhāvasampannaru.
Intaha mahāmahēśvararige svānubhāvava karuṇisaballa
em'ma paraśivamūrti mahadguru(vē)svānubhāvadalli guru kāṇire.
Mātāpitara guruvembiri,
Laghuvinalli tāvellaru janisidiri.
Tam'ma sthitiyū laghu, laghuvāgi layavappudu guruve? Alla.
Sōmaḥ pavatē janitā matīnāṁ janitā divō|
janitā pr̥thvivyā janitāgnērjanitā sūryasya||
`janitōthaviṣṇōḥʼ
endudāgi,
`śivō mamaiva pitāʼ
endudāgi,
sarvarigū mātāpitanappa em'ma paraśivamūrti
mahāsadguruvē guru kāṇiro.
Bhaktiyalli guruve?
Nimage lavalēśa bhaktiyilla, nīvellaru upādhikaru.
Nirupādhikaru em'ma mahāsadbhaktaru
tanu mana dhanavanarpisi uṇḍu uṇisi
āḍi hāḍi sukhiyādaru śaraṇaru.
Intaha śaraṇabharita sadāśivamūrti
mahāsadguruvē bhaktiyalli guru kāṇire.
Jñānadalli guruvē?
Nīvellaru dēvadānava mānavaru ajñānigaḷu.
Jñātr̥ jñāna jñēyavappa paraśivaliṅgavanariyade
ahaṅkāradiṁ laghuvādiri.
Paradhana parastrī parakṣētrakke āsemāḍi laghuvādiri
Nirāśasampūrṇaru śivajñānasampannaru em'ma māhēśvararu
intaha māhēśvarariṅge śivajñānava karuṇisuva
em'ma paraśivamūrti mahāsadguruvē guru kāṇire.
Vairāgyadalli guruve?
Nīvu āśābad'dharu,
nirāśāsampūrṇaru em'ma sadbhaktaru.
Intaha bhaktadēhikanappa dēva em'ma paraśivamūrti
mahāsadguruvē vairāgyadalli guru kāṇire.
Idu kāraṇa,
nityadalli