ಜ್ಞಾ[ತೃ] ವೇ ಗುರು, ಜ್ಞಾನವೇ ಲಿಂಗ,
ಜ್ಞೇಯವೇ ಜಂಗಮ.
ಈ ತ್ರಿವಿಧವ ಶ್ರೀಗುರು
ಅಂಗತ್ರಯ, ಮನತ್ರಯ,
ಆತ್ಮತ್ರಯದ ಮೇಲೆ ತೋರಿದನಾಗಿ,
ಜ್ಞಾತ್ರ ಜ್ಞಾನ ಜ್ಞೇಯ ಬೇರಿಲ್ಲದರಿವು ತಾನೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Jñā[tr̥] vē guru, jñānavē liṅga,
jñēyavē jaṅgama.
Ī trividhava śrīguru
aṅgatraya, manatraya,
ātmatrayada mēle tōridanāgi,
jñātra jñāna jñēya bērilladarivu tāne,
uriliṅgapeddipriya viśvēśvarā.