Index   ವಚನ - 128    Search  
 
ಜ್ಞಾನವೇ ಪ್ರಸಾದಕಾಯ, ಜ್ಞೇಯವೇ ಚಿನ್ಮಯಲಿಂಗ, ಜ್ಞಾನ ಜ್ಞೇಯ ಸಂಪುಟದಿಂದ ಶರಣನೆನಿಕೊಂಡ ಜಂಗಮದ ಅಂತರಂಗದಲ್ಲಿಯೂ ನೀನೇ, ಬಹಿರಂಗದಲ್ಲಿಯೂ ನೀನೇ, ಎಂತು ನೋಡಿದಡೆ ಶರಣರ ಕಣ್ಣ ಮೊದಲಲ್ಲಿಯೂ ನೀನೇ. ಶೀವಜ್ಞಾನಸಂಪನ್ನನಾದ ಶರಣಂಗೆ ಆಹ್ವಾನವಿಲ್ಲ, ವಿಸರ್ಜನೆ ಎಂಬುದಿಲ್ಲ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.