ಜ್ಞಾನವೇ ಪ್ರಸಾದಕಾಯ,
ಜ್ಞೇಯವೇ ಚಿನ್ಮಯಲಿಂಗ,
ಜ್ಞಾನ ಜ್ಞೇಯ ಸಂಪುಟದಿಂದ
ಶರಣನೆನಿಕೊಂಡ ಜಂಗಮದ
ಅಂತರಂಗದಲ್ಲಿಯೂ ನೀನೇ,
ಬಹಿರಂಗದಲ್ಲಿಯೂ ನೀನೇ,
ಎಂತು ನೋಡಿದಡೆ ಶರಣರ ಕಣ್ಣ ಮೊದಲಲ್ಲಿಯೂ ನೀನೇ.
ಶೀವಜ್ಞಾನಸಂಪನ್ನನಾದ ಶರಣಂಗೆ ಆಹ್ವಾನವಿಲ್ಲ,
ವಿಸರ್ಜನೆ ಎಂಬುದಿಲ್ಲ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Jñānavē prasādakāya,
jñēyavē cinmayaliṅga,
jñāna jñēya sampuṭadinda
śaraṇanenikoṇḍa jaṅgamada
antaraṅgadalliyū nīnē,
bahiraṅgadalliyū nīnē,
entu nōḍidaḍe śaraṇara kaṇṇa modalalliyū nīnē.
Śīvajñānasampannanāda śaraṇaṅge āhvānavilla,
visarjane embudilla
uriliṅgapeddipriya viśvēśvarā.