Index   ವಚನ - 127    Search  
 
ಜ್ಞಾ[ತೃ] ವೇ ಗುರು, ಜ್ಞಾನವೇ ಲಿಂಗ, ಜ್ಞೇಯವೇ ಜಂಗಮ. ಈ ತ್ರಿವಿಧವ ಶ್ರೀಗುರು ಅಂಗತ್ರಯ, ಮನತ್ರಯ, ಆತ್ಮತ್ರಯದ ಮೇಲೆ ತೋರಿದನಾಗಿ, ಜ್ಞಾತ್ರ ಜ್ಞಾನ ಜ್ಞೇಯ ಬೇರಿಲ್ಲದರಿವು ತಾನೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.