Index   ವಚನ - 159    Search  
 
ನೆಲನನೊಳಕೊಂಡ ಸಲಿಲ, ಸಲಿಲವನೊಳಕೊಂಡ ಅನಲ ಅನಲನನೊಳಕೊಂಡ ಅನಿಲ, ಅನಿಲನನೊಳಕೊಂಡ ಆಕಾಶ ಆಕಾಶವನೊಳಕೊಂಡ ಮನ, ಮನವನೊಳಕೊಂಡ ಬುದ್ಧಿ ಬುದ್ಧಿಯನೊಳಕೊಂಡ ಪ್ರಕೃತಿ, ಪ್ರಕೃತಿಪುರುಷಜಗವೆಲ್ಲನೊಳಕೊಂಡ ವಿಶುದ್ಧಕಾಯನು ಭಕ್ತದೇಹಿಕದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.