ಪಂಚಗವ್ಯದಿಂದಾದ ಗೋಮಯವಂ ತಂದಾರಿಸಿ
ಪಂಚಾಮೃತಸಂಪರ್ಕದಿಂ ಪಂಚಾಕ್ಷರಿಯ
ಮಂತ್ರದಿಂ ಅಭಿವಂದಿಸಿ
ಶಿವನ ವಹ್ನಿಯಲ್ಲಿ ದಹಿಸಿ
ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು
ಎಡದ ಹಸ್ತದೊಳ್ಪಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿ
ಜಲಮಿಶ್ರವಂ ಮಾಡಿ, ಲಲಾಟ ಮೊದಲಾಗಿ
ದಿವ್ಯಸ್ಥಾನಂಗಳೊಳು ಧರಿಸಿ
ಲಿಂಗಾರ್ಚನೆಯಂ ಮಾಡುವ ಶರಣ, ಆತನೇ ವೇದವಿತ್ತು,
ಆತನೇ ಶಾಸ್ತ್ರಜ್ಞ, ಆತನೇ ಸದ್ಯೋನ್ಮುಕ್ತನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Pan̄cagavyadindāda gōmayavaṁ tandārisi
pan̄cāmr̥tasamparkadiṁ pan̄cākṣariya
mantradiṁ abhivandisi
śivana vahniyalli dahisi
ā vibhūtiyaṁ sukr̥tadiṁ tegedukoṇḍu
eḍada hastadoḷpiḍidukoṇḍu, balada hastadiṁ mucci
jalamiśravaṁ māḍi, lalāṭa modalāgi
divyasthānaṅgaḷoḷu dharisi
liṅgārcaneyaṁ māḍuva śaraṇa, ātanē vēdavittu,
ātanē śāstrajña, ātanē sadyōnmuktanayyā,
uriliṅgapeddipriya viśvēśvarā.