Index   ವಚನ - 163    Search  
 
ಪಂಚಭೂತದನುವರಿದು ಸುಸಂಗನಾದಬಳಿಕ ಪಂಚಮುಖನು ಬೇರುಂಟೆ ತನ್ನೊಳಗಲ್ಲದೆ? ವಂಚನೆಯೊಳು ಪಂಚಬ್ರಹ್ಮವನೋದಿ ಫಲವೇನು? ಈಚುವೋದ ತೆನೆಯಂತೆ ವಂಚನೆಯಿಲ್ಲದೆ ಸಂಚಿಸಿಕೊಳ್ಳನೆ ಕಂಚಿಯ ಕೈಲಾಸಕ್ಕೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?