Index   ವಚನ - 166    Search  
 
ಪದ ಪದವಿಗಳ ವಿಚಾರಿಸಲು ಸಾಧಾರಣಪ್ರಾಣಿಗಳ ಪದವಿಗಳಿಂದ ಮಾನವಪದ ವಿಶೇಷ, ಮಾನವರ ಪದವಿಗಳಿಂದ ದೇವಜಾತಿಗಳ ಪದ ವಿಶೇಷ, ದೇವಜಾತಿಗಳ ಪದವಿಯಿಂದ ಇಂದ್ರಪದ ವಿಶೇಷ, ಇಂದ್ರಪದವಿಯಿಂದ ಬ್ರಹ್ಮಪದ ವಿಶೇಷ, ಬ್ರಹ್ಮಪದವಿಯಿಂದ ವಿಷ್ಣುಪದ ವಿಶೇಷ, ವಿಷ್ಣುಪದವಿಯಿಂದ ರುದ್ರಪದ ವಿಶೇಷ, ರುದ್ರಪದವಿಯಿಂದ ಲಿಂಗಪದ ವಿಶೇಷ, ಲಿಂಗಾಲಿಂಗೀ ತು ಮತ್ಕರ್ತಾ ಲಿಂಗಾಲಿಂಗೀ ಮಮ ಪ್ರಭುಃ ಲಿಂಗಾಲಿಂಗೀ ಮಮ ಸ್ವಾಮೀ ಲಿಂಗಾಲಿಂಗೀ ಮನೋಹರಃ ಇಂತೆಂದುದಾಗಿ ಮಹಾಪದವಿಯಲ್ಲಿರ್ದು, ಲಿಂಗಭೋಗೋಪಭೋಗವನರಿಯದೆ, ಭೋಗಿಸಲರಿಯದೆ, ಅಲ್ಪಪದವಿಯಲ್ಲಿರ್ದು ಅಲ್ಪರನಾಶೆಗೈದಡೆ ಜ್ಞಾನಿಯಲ್ಲ, ಭಕ್ತನಲ್ಲ, ಶರಣನಲ್ಲ. ಆವಂಗೆ ಲಿಂಗವಿಲ್ಲಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.