Index   ವಚನ - 190    Search  
 
`ಬಸವ, ಬಸವ, ಬಸವ' ಎನುತಿರ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲ! ಅನಾದಿ ಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೆ ಬಹಿಷ್ಕರಿಸಿತ್ತು. ಆ ಚಿತ್ತೆ ಚಿದಂಗ ಬಸವ, ಆ ಚಿದಂಗ ಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರು ಜ್ಯೋತಿರ್ಮಯಲಿಂಗವಪ್ಪುದು ತಪ್ಪದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.