Index   ವಚನ - 198    Search  
 
ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣುಮಾಯೆ, ಜಗಮಾಯೆಯಿಲ್ಲದಂದು, ಸೃಷ್ಟಿಯಸೃಷ್ಟಿ ಇಲ್ಲದಂದು, ಕಾಳಿಂಗ ಕರಿಕಂಠರಿಲ್ಲದಂದು, ಉಮೆಯ ಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು, ನಂದಿಕೇಶ್ವರ ದಂಡನಾಥರಿಲ್ಲದಂದು, ವಿಷವನಮೃತ ಮಾಡದಂದು, ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಿಸ್ಥಲವಿಲ್ಲದಂದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. ನಿಮ್ಮ ನಿಲವನಾರು ಬಲ್ಲರು?