Index   ವಚನ - 205    Search  
 
ಭಕ್ತಿ ಭಕ್ತಿಯೆಂಬರು: ಭಕ್ತಿ ಹಿಂದೊ ಮುಂದೊ ಬಲ್ಲಡೆ ನೀವು ಹೇಳಿರೆ. ಗುರುಲಿಂಗಜಂಗಮ ಒಂದೆ ಎಂದರಿಯದೆ, ಮಾಡುವ ಭಕ್ತಿ ಅದೆ ಅನಾಚಾರ. ಅವರು ಪ್ರಸಾದಕ್ಕೆ ದೂರ. ಅದಲ್ಲ ನಿಲ್ಲು ಮಾಣು. ಜಂಗಮವಿರಹಿತವಾದ ಭಕ್ತಿ ಇಲ್ಲ. ಭಕ್ತಂಗಾದಡೂ ಜಂಗಮವೆ ಬೇಕು, ಜಂಗಮಕ್ಕಾದಡೂ ಜಂಗಮವೆ ಬೇಕು. ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ಭಕ್ತಿಸ್ಥಲ ನಿಮ್ಮ ಶರಣರಿಗಲ್ಲದಳವಡದು.