Index   ವಚನ - 204    Search  
 
ಭಕ್ತರಲ್ಲದವರನಾಸೆಗೈದಡೆ ಕಕ್ಕುಲತೆಯಲ್ಲದೆ ಕಾರ್ಯವಲ್ಲ. ಆಸೆಗೈದಡೆ, ಆಸೆಗೈವುದು ಭಕ್ತರನು. ಆಸೆಗೈದು ಬಂದ ಶಿವಂಗೆ ಸುತನ ಕೊಟ್ಟರು, ಧನವ ಕೊಟ್ಟರು, ಮನವ ಕೊಟ್ಟರು, ಅಸುವ ಕೊಟ್ಟರು. ಶರಣನ ಪರಿ ಯಾವ ಲೋಕದೊಳಗೂ ಇಲ್ಲ. ಶರಣಭರಿತಲಿಂಗವಾಗಿ ಬೇಡಿದ್ದ ಕೊಡುವರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.